ಫಿಪಾ ರ‍್ಯಾಂಕಿಂಗ್: ಭಾರತ ನಂ.96
ಹೊಸದಿಲ್ಲಿ, ಜು.6: ಜಾಗತಿಕ ಫುಟ್ಬಾಲ್ ಸಂಘಟನೆ ಫಿಫಾ ರ್ಯಾಂಕಿಂಗ್‌ನಲ್ಲಿ ಭಾರತ 96ನೆ ಸ್ಥಾನ ಪಡೆಯುವ ಮೂಲಕ 1996ರ ಬಳಿಕ ಅತ್ಯುತ್ತಮ ಸಾಧನೆ ಮಾಡಿದೆ.
ಇದಕ್ಕೂ ಮೊದಲು 1993ರಲ್ಲಿ 99ನೆ ಸ್ಥಾನಕ್ಕೇರಿತ್ತು. 1996ರಲ್ಲಿ ಫಿಫಾ ರ್ಯಾಂಕಿಂಗ್‌ನಲ್ಲಿ ಭಾರತ 94ನೆ ಸ್ಥಾನ ಪಡೆದಿತ್ತು. ಭಾರತದ ಫುಟ್ಬಾಲ್ ರಾಷ್ಟ್ರೀಯ ತಂಡ ಕಳೆದ ಎರಡು ವರ್ಷಗಳಲ್ಲಿ 77 ಸ್ಥಾನಗಳಷ್ಟು ಮೇಲೆರಿದೆ .ಭಾರತ 15 ಪಂದ್ಯಗಳ ಪೈಕಿ 13ರಲ್ಲಿ ಜಯ ಗಳಿಸಿದೆ. ಕಳೆದ ಎಂಟು ಪಂದ್ಯಗಳಲ್ಲಿ ಸೋಲು ಕಂಡಿಲ್ಲ. ಇದರಲ್ಲಿ ಭೂತಾನ್ ತಂಡದ ವಿರುದ್ಧ ಆಡಿದ ಅನಧಿಕೃತ ಪಂದ್ಯ ಸೇರಿದೆ.
ಇದೇ ವೇಳೆ ಎಎಫ್‌ಸಿ ಏಶಿಯನ್ ರ‍್ಯಾಂಕಿಂಗ್‌ನಲ್ಲಿ ಭಾರತ 12ನೆ ಸ್ಥಾನ ಗಿಟ್ಟಿಸಿಕೊಂಡಿದೆ.
Next Story





