ಜೊಕೊವಿಕ್ ಮೂರನೆ ಸುತ್ತಿಗೆ
ಲಂಡನ್, ಜು.6: ಆಡಮ್ ಪಾವಿಯಸೆಕ್ ವಿರುದ್ಧ ನೇರ ಸೆಟ್ಗಳಿಂದ ಜಯ ಸಾಧಿಸಿರುವ ಮೂರು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ ವಿಂಬಲ್ಡನ್ ಮೂರನೆ ಸುತ್ತು ಪ್ರವೇಶಿಸಿದ್ದಾರೆ.
ಇಲ್ಲಿ ಗುರುವಾರ ನಡೆದ ಪುರುಷರ ಸಿಂಗಲ್ಸ್ನ ಎರಡನೆ ಸುತ್ತಿನ ಪಂದ್ಯದಲ್ಲಿ ಜೊಕೊವಿಕ್ ಝೆಕ್ನ ಎದುರಾಳಿಯನ್ನು 6-2, 6-2, 6-1 ಸೆಟ್ಗಳ ಅಂತರದಿಂದ ಮಣಿಸಿದ್ದಾರೆ.
ತನ್ನ ಬಾಲ್ಯದ ಹೀರೊ ಜೊಕೊವಿಕ್ ವಿರುದ್ಧ ಆಡಿದ 136ನೆ ರ್ಯಾಂಕಿನ ಪಾವಿಯಸೆಕ್ ಯಾವ ಹಂತದಲ್ಲೂ ಹೋರಾಟ ನೀಡಲಿಲ್ಲ. ಮೊದಲ ಸುತ್ತಿನ ಪಂದ್ಯದಲ್ಲಿ ಎದುಆಳಿ ಆಟಗಾರ ಗಾಯಗೊಂಡು ಹಿಂದೆ ಸರಿದಿದ್ದ ಕಾರಣ ಜೊಕೊವಿಕ್ 2ನೆ ಸುತ್ತಿಗೇರಿದ್ದರು. ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಅರ್ಜೆಂಟೀನದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅಥವಾ ಲಾಟ್ವಿಯದ ಎರ್ನೆಸ್ಟ್ಸ್ ಗುಲ್ಬಿಸ್ರನ್ನು ಎದುರಿಸುವ ಸಾಧ್ಯತೆಯಿದೆ.
Next Story