ವಿವಾದದ ಭೀತಿಯಲ್ಲಿ ಪಾರ್ಟಿಶನ್-1947

ದೇಶವಿಭಜನೆಯ ಕಥಾವಸ್ತುವುಳ್ಳ ಬಾಲಿವುಡ್ ಚಿತ್ರ ‘ಪಾರ್ಟಿಶನ್-1947’ ಆಗಸ್ಟ್‌ನಲ್ಲಿ ರಿಲೀಸ್‌ಗೆ ಸಜ್ಜಾಗಿದೆ. ‘ಬೆಂಡ್ ಇಟ್ ಲೈಕ್ ಬೆಕ್‌ಹ್ಯಾಂ’ ಖ್ಯಾತಿಯ ಗುರೀಂದರ್ ಚಡ್ಡಾ ನಿರ್ದೇಶನದ ಈ ಚಿತ್ರದಲ್ಲಿ ಜವಾಹರ ಲಾಲ್ ನೆಹರೂ ಹಾಗೂ ಲೇಡಿ ವೌಂಟ್‌ಬ್ಯಾಟನ್ ಅವರ ನಡುವಿನ ಆತ್ಮೀಯ ಬಾಂಧವ್ಯದ ಕುರಿತಾದ ಕೆಲವು ಸನ್ನಿವೇಶ ಗಳೂ ಇವೆಯಂತೆ. ಹಾಗಿದ್ದಲ್ಲಿ ಚಿತ್ರವು ವಿವಾದಕ್ಕೆ ತುತ್ತಾಗುವುದ ರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ ಚಿತ್ರೋದ್ಯಮದ ಮಂದಿ. ಆದರೆ ನಿರ್ದೇಶಕಿ ಗುರೀಂದರ್ ಚಡ್ಡಾ ಅದನ್ನು ಅಲ್ಲಗಳೆಯುತ್ತಾರೆ. ಯಾರ ಭಾವನೆಗೂ ಘಾಸಿಯಾಗದ ರೀತಿಯಲ್ಲಿ ಈ ಸನ್ನಿವೇಶ ಗಳು ಮೂಡಿಬಂದಿದ್ದು, ಇಲ್ಲಿ ವಿವಾದದ ಪ್ರಶ್ನೆಯೇ ಉದ್ಭವಿಸದು ಎನ್ನುತ್ತಾರವರು. ಚಿತ್ರದ ಸಬ್ಜೆಕ್ಟ್‌ಗೆ ಅಂತಹ ಕೆಲವು ಸನ್ನಿವೇಶ ಗಳು ಅಗತ್ಯವಿರುವುದರಿಂದ ಅವನ್ನು ಅಳವಡಿಸಲಾಗಿದೆ ಎಂದವರು ಹೇಳುತ್ತಾರೆ.
ಅದೇನಿದ್ದರೂ, ಪಾರ್ಟಿಶನ್-1947 ಚಿತ್ರವು ದೇಶ ವಿಭಜನೆ ಯು ಜನಸಾಮಾನ್ಯರನ್ನು ಹೇಗೆ ಜರ್ಜರಿತಗೊಳಿಸಿತೆಂಬು ದನ್ನು, ಇಂದಿನ ತಲೆಮಾರಿಗೆ ನೆನಪಿಸುವ ಒಂದು ಪ್ರಾಮಾಣಿಕ ಪ್ರಯತ್ನವೆಂದು ಗುರಿಂದರ್ ಹೇಳುತ್ತಾರೆ.
ಎ.ಆರ್.ರಹ್ಮಾನ್ ಅವರ ಸಂಗೀತ, ಈ ಚಿತ್ರದ ಪ್ರಮುಖ ಹೆಲೈಟ್‌ಗಳಲ್ಲೊಂದೆನ್ನಲಾಗಿದೆ. ಸಾರ್ವಕಾಲಿಕ ಜನಪ್ರಿಯ ಹಾಡು ‘ದಂ ದಂ ಮಸ್ತ್ ಖಲಂದರ್’ ಹಾಡನ್ನು ರಹ್ಮಾನ್ ಈ ಚಿತ್ರ ದಲ್ಲಿ ಹೊಸ ಟ್ಯೂನ್‌ನೊಂದಿಗೆ ಮರುಸೃಷ್ಟಿಸಿದ್ದಾರೆ. ಅಲ್ಲದೆ ಈ ಹಾಡು ಬಾಲಿವುಡ್‌ನಲ್ಲಿ ಹೊಸ ಟ್ರೆಂಡ್‌ಸೆಟ್ಟರ್ ಎನಿಸಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹುಮಾ ಖರೇಷಿ, ಮನೀಶ್ ದಯಾಳ್, ಓಂಪುರಿ, ಹ್ಯೂಗ್ ಬೊನ್ನಿವಿಲೆ ಹಾಗೂ ಗಿಲಿಯನ್ ಆ್ಯಂಡರ್ಸನ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆಗಸ್ಟ್ 18ರಂದು ತೆರೆಕಾಣಲಿರುವ ಈ ಚಿತ್ರ ವಿದೇಶಗಳಲ್ಲಿ ವೈಸ್‌ರಾಯ್ಸ್ ಹೌಸ್ ಎಂಬ ಹೆಸರಿನಲ್ಲಿ ಬಿಡುಗಡೆಯಾಗಲಿದೆ.







