ಮೀನಿನ ಮಲಿನ ನೀರು ರಸ್ತೆಗೆ: ಓರ್ವ ಸೆರೆ

ಮಂಜೇಶ್ವರ, ಜು. 7: ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡಿ ಮಲಿನ ನೀರನ್ನು ಸಾರ್ವಜನಿಕ ಸ್ಥಳದಲ್ಲಿ ಚೆಲ್ಲಿ ಸಾರ್ವಜನಿಕರಿಗೆ ತೊಂದರೆಯುಂಟುಮಾಡಿದ ಆರೋಪದಂತೆ ಮಂಜೇಶ್ವರ ಪೆÇಲೀಸರು ಓರ್ವನನ್ನು ಸೆರೆ ಹಿಡಿದಿದ್ದಾರೆ.
ಗುರುವಾರ ಸಂಜೆ 4 ಗಂಟೆಗೆ ಉಪ್ಪಳ ಬಳಿಯ ಹನಫಿ ಬಜಾರ್‍ನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮೀನು ಮಾರಾಟ ಮಾಡುತ್ತಿದ್ದ ಹೊಸಂಗಡಿ ಚೆಕ್‍ಪೆÇಸ್ಟ್ ಬಳಿಯ ನಿವಾಸಿ ಅಬ್ದುಲ್ಲ ಎಂಬವರ ಪುತ್ರ ತೌಸೀಫ್ (30) ಎಂಬಾತನನ್ನು ಸೆರೆಹಿಡಿದಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಎಸ್.ಐ ಅನೂಪ್ ಕುಮಾರ್‍ರ ದೂರಿನಂತೆ ಈತನ ವಿರುದ್ಧ ಕೇಸು ದಾಖಲಿಸಿ ಬಳಿಕ ಎಚ್ಚರಿಕೆ ನೀಡಿ ಜಾಮೀನಿನಲ್ಲಿ ಬಿಡುಗಡೆಗೊಳಿಸಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.
Next Story