ಮತ್ತೆ ಮುಜುಗರಕ್ಕೀಡಾದ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷರನ್ನು ಕಂಡೂ ಕಾಣದಂತೆ ಮುಂದೆ ಸಾಗಿದ ಪೋಲಂಡ್ ಅಧ್ಯಕ್ಷರ ಪತ್ನಿ
ವಾರ್ಸಾವ್,ಜು.7 : ಪೋಲಂಡ್ ರಾಜಧಾನಿ ವಾರ್ಸಾವ್ ಗೆ ಪತ್ನಿ ಮೆಲಾನಿಯಾ ಜತೆ ಭೇಟಿ ನೀಡಿದ್ದ ಅಮೆರಿಕಾ ಅಧ್ಯಕ್ಷ ಅಲ್ಲಿ ಮುಜುಗರಕ್ಕೀಡಾದ ಪ್ರಸಂಗವೊಂದು ನಡೆದಿದೆ. ಅಧಿಕೃತ ಫೋಟೋ ಕ್ಲಿಕ್ಕಿಸುವ ಸಲುವಾಗಿ ಟ್ರಂಪ್ ಮತ್ತವರ ಪತ್ನಿ ಹಾಗೂ ಪೋಲಂಡ್ ಅಧ್ಯಕ್ಷ ಅಂಡ್ರ್ ಝೆಜ್ ಡುಡಾ ಮತ್ತು ಫಸ್ಟ್ ಲೇಡಿ ಅಗಥಾ ಕೊರ್ನ್ ಹೌಸರ್ ಡುಡ ಅಲ್ಲಿ ಹಾಜರಿದ್ದರು. ಟ್ರಂಪ್ ಅವರು ಮೊದಲು ಅಧ್ಯಕ್ಷರ ಕೈಕುಲುಕಿ ನಂತರ ಪೋಲಂಡ್ ಫಸ್ಟ್ ಲೇಡಿಯ ಕೈಕುಲುಕಲೆಂದು ಕೈ ಮುಂದೆ ಮಾಡಿದ್ದೇ ಬಂತು. ಪೋಲಂಡ್ ಫಸ್ಟ್ ಲೇಡಿ ಟ್ರಂಪ್ ಅವರನ್ನು ಕಂಡೂ ಕಾಣದಂತೆ ಮುಂದೆ ಹೊಗಿ ಟ್ರಂಪ್ ಅಚ್ಚರಿಯಿಂದ ನೋಡುತ್ತಿದ್ದಂತೆಯೇ ಮೆಲಾನಿಯಾ ಅವರ ಕೈಕುಲುಕಿ ಬಿಟ್ಟರು. ನಂತರ ಹಿಂದಿರುಗಿ ಟ್ರಂಪ್ ಅವರಿಗೆ ಹಸ್ತಲಾಘವ ನೀಡಿದರು.
ಇದು ಪೋಲಂಡ್ ಫಸ್ಟ್ ಲೇಡಿಯಿಂದ ಟ್ರಂಪ್ ಅವರಿಗೆ ಮಾಡಿದ ಅವಮಾನವೆಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆಯೇ ಪೋಲಂಡ್ ಅಧ್ಯಕ್ಷ ಟ್ವಿಟ್ಟರ್ ಮೂಲಕ ಸ್ಪಷ್ಟೀಕರಣ ನೀಡಿ ಕೆಲವೊಂದು ವರದಿಗಳಿಗೆ ತದ್ವಿರುದ್ಧವಾಗಿ ತಮ್ಮ ಪತ್ನಿ ಟ್ರಂಪ್ ಅವರ ಕೈಕುಲುಕಿದ್ದಾರೆ ಎಂದಿದ್ದಾರೆ.
ಟ್ವಿಟ್ಟರಿನಲ್ಲಿ ಹಲವರು ಪೋಲಂಡ್ ಫಸ್ಟ್ ಲೇಡಿ ಉದ್ದೇಶಪೂರ್ವಕವಾಗಿ ಟ್ರಂಪ್ ಅವರನ್ನು ಅವಮಾನಿಸಿದ್ದಾರೆ ಎಂದು ಹೇಳಿಕೊಂಡರೆ ಇನ್ನು ಕೆಲವರು ಪೋಲಂಡ್ ನ ಫಸ್ಟ್ ಲೇಡಿ ಟ್ರಂಪ್ ಅವರು ತಮ್ಮ ಕೈ ಮುಂದೆ ಮಾಡಿದ್ದನ್ನು ನೋಡಿಲ್ಲ ಎಂದಿದ್ದಾರೆ.
ಟ್ರಂಪ್ ಅವರು ಜನವರಿಯಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಅವರು ವಿಶ್ವ ನಾಯಕರಿಗೆ ನೀಡುತ್ತಿರುವ ಹಸ್ತಲಾಘವ ಸಾಕಷ್ಟು ಸುದ್ದಿ ಮಾಡಿದೆ.
Folks, Poland's first lady did not diss Trump's handshake attempt. She was looking at Melania, shook her hand, then shook Trump's. Stop. pic.twitter.com/ta8DNsv0Th
— Bradd Jaffy (@BraddJaffy) July 6, 2017
Trump's trip to Poland is going well. pic.twitter.com/ykWMlKEuwu
— Andy Ha (@_AndyHa) July 6, 2017
Contrary to some surprising reports my wife did shake hands with Mrs. and Mr. Trump @POTUS after a great visit. Let's FIGHT FAKE NEWS.
— Andrzej Duda (@AndrzejDuda) July 6, 2017
Polish first Lady Agata Dudas did shake President Trump's hand, see full video. pic.twitter.com/BOw5tY4R4R
— Beatrice-Elizabeth (@MissBeaE) July 6, 2017