ಎಮ್ಮೆದೊಡ್ಡಿ ಭಾಗದ ವಿದ್ಯುತ್ ಸಮಸ್ಯೆ ನಿವಾರಣೆಗೆ ರೂ.10 ಕೋಟಿ ಮಂಜೂರು: ಶಾಸಕ ದತ್ತ
ಕಡೂರು, ಜು.8: ಕಳೆದ 30 ವರ್ಷಗಳಿಂದ ತಾಲೂಕಿನ ಎಮ್ಮೆದೊಡ್ಡಿ ಭಾಗದಲ್ಲಿ ವಿದ್ಯುತ್ ಸಮಸ್ಯೆ ಇದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಅವರು ಶನಿವಾರ ತಾಲೂಕಿನ ಬುಕ್ಕಸಾಗರ ಸಮೀಪ ಪಾದಯಾತ್ರೆ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿ, ಈ ಭಾಗಕ್ಕೆ ಎರಡು ಭಾಗದಿಂದ ವಿದ್ಯುತ್ ಸರಬರಾಜು ಆಗುತ್ತಿದ್ದು, ಇದು ಅಲ್ಪ ಪ್ರಮಾಣದ್ದಾಗಿದೆ. ಶಾಶ್ವತ ಪರಿಹಾರಕ್ಕಾಗಿ ರೂ. 10 ಕೋಟಿ ಮಂಜೂರು ಮಾಡಿಸಲಾಗಿದೆ. ಬ್ಯಾಗಡೇಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ನಾಗೇನಹಳ್ಳಿ ವರೆಗೆ ತಂಗಲಿ ಶ್ರೀರಾಂ ಪುರದಿಂದ ಎಮ್ಮೇದೊಡ್ಡಿ ಭಗಕ್ಕೆ ಉತ್ತಮ ಗುಣಮಟ್ಟದ ವಿದ್ಯುತ್ ದೊರಕಲಿದೆ, ಇದರಿಂದ ಈ ಭಾಗದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿದಂತಾಗಿದೆ ಎಂದರು.
ಶಾಸಕರಾಗಿದ್ದ ಧರ್ಮೇಗೌಡ ಇವರ ಆಡಳಿತ ಅವದಿಯಲ್ಲಿ ಅನುಮೋದನೆ ದೊರೆಕಿತ್ತು ಆದರೆ ಈ ಯೋಜನೆ ಯಾವುದೂ ಕಾರಣಕ್ಕೆ ನೆನಗುದಿಗೆ ಬಿದ್ದಿತ್ತು, ನಂತರ ಶಾಸಕರಾದ ಕೆ.ಎಂ. ಕೃಷ್ಣಮೂರ್ತಿ ಈ ಯೋಜನೆಗೆ ಪ್ರಯತ್ನಿಸಿದರು, ಜಾಗದ ಸಮಸ್ಯೆಯಿಂದಾಗಿ ಕಾರ್ಯ ಮುಂದುವರೆಯಲಿಲ್ಲ, ಈಗ ಜಾಗದ ಸಮಸ್ಯೆ ನಿವಾರಣೆಯಾಗಿ ಅನುದಾನದ ಮಂಜೂರಾತಿ ದೊರಕಿದ್ದು, ಟೆಂಡರ್ ಮುಗಿದು ಗುತ್ತಿಗೆದಾರರು ಎಲ್ಲಾ ರೀತಿಯ ಸಲಕರಣೆಗಳನ್ನು ದಾಸ್ತನು ಮಾಡಿದ್ದು, ಸದಯದಲ್ಲಿಯ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ಈ ಸಂದರ್ಭ ಪಕ್ಷದ ಮುಖಂಡರಾದ ಭಂಡಾರಿಶ್ರೀನಿವಾಸ್, ಕೆ.ಎಸ್. ರಮೇಶ್, ಕಂಸಾಗರ ಶೇಖರ್, ಚನ್ನವೀರಪ್ಪ, ತಿಮ್ಮೇಗೌಡ, ಮಂಜುನಾಥ ಪ್ರಸನ್ನ ಮತ್ತಿತರರಿದ್ದರು.







