1993ರ ಮುಂಬೈ ಸರಣಿ ಸ್ಫೋಟ ಆರೋಪಿ ಬಿಜ್ನೋರ್‌ನಲ್ಲಿ ಸೆರೆ
ಲಕ್ನೋ,ಜು.8: 1993ರ ಮುಂಬೈ ಸರಣಿ ಸ್ಫೋಟಗಳ ಆರೋಪಿ ಕಾದಿರ್ ಅಹ್ಮದ್ ಎಂಬಾತನನ್ನು ಉತ್ತರ ಪ್ರದೇಶ ಎಟಿಎಸ್ ಮತ್ತು ಗುಜರಾತ್ ಎಟಿಎಸ್‌ಗಳ ಜಂಟಿ ಕಾರ್ಯಾಚರಣೆಯಲ್ಲಿ ಶನಿವಾರ ಆತನ ತವರೂರು ಬಿಜ್ನೋರ್‌ನಲ್ಲಿ ಬಂಧಿಸಲಾಗಿದೆ.
ಟಾಡಾ ಕಾಯ್ದೆಯಡಿ ಆರೋಪಿಯಾಗಿರುವ ಅಹ್ಮದ್ ಪ್ರಮುಖ ರೂವಾರಿ ಟೈಗರ್ ಮೆಮನ್ ಸ್ಫೋಟಗಳನ್ನು ನಡೆಸಲು ರವಾನಿಸಿದ್ದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಗುಜರಾತಿನ ಜಾಮನಗರದಲ್ಲಿ ಇಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಹೇಳಲಾಗಿದೆ.
ಉತ್ತರ ಪ್ರದೇಶ ಎಟಿಎಸ್ ಮತ್ತು ಗುಜರಾತ ಪೊಲೀಸರು ಅಹ್ಮದ್‌ನನ್ನು ಪ್ರಶ್ನಿಸುತ್ತಿದ್ದು, ಹೆಚ್ಚಿನ ವಿಚಾರಣೆಗಾಗಿ ಆತನನ್ನು ಗುಜರಾತ್‌ಗೆ ಕರೆದೊಯ್ಯಲಾಗುವುದು ಎಂದು ಉ.ಪ್ರ.ಎಟಿಎಸ್ ಐಜಿ ಅಸೀಂ ಅರುಣ್ ತಿಳಿಸಿದರು.
Next Story





