ವಿಸ್ಮಯಕಾರಿ ಚಿಕಿತ್ಸೆ ಆಕ್ಯುಪಂಚರ್

ಈ ಚಿಕಿತ್ಸೆಯ ವಿಶೇಷವೆಂದರೆ ಯಾವುದೇ ಅಡ್ಡಪರಿಣಾಮಗಳಿಲ್ಲದಿರುವುದು ಹಾಗೂ ಕೃತಕ ಔಷಧಗಳ ಬಳಕೆ ಇಲ್ಲದಿರುವುದು, ಆದರೆ ಈ ಚಿಕಿತ್ಸೆಯನ್ನು ಸಾಂಪ್ರದಾಯಿಕ ವೈದ್ಯಪ್ರಕಾರಗಳಾದ ಆಯುರ್ವೇದ, ಹೋಮಿಯೋಪತಿ, ಯುನಾನಿ, ಹಾಗೂ ಸಿದ್ಧ ಔಷಧ ಗಳೊಡನೆ ಬಳಸಬಹುದಾಗಿದೆ. ಏಕೆಂದರೆ ಇಲ್ಲಿ ಬಳಸುವ ಔಷಧಿಗಳು ಗಿಡಮೂಲಿಕೆಗಳಾಗಿದ್ದು ನಮ್ಮ ಆಹಾರದ ಭಾಗವೇ ಆದ್ದರಿಂದ ಇವುಗಳ ಬಳಕೆಗೆ ನಿರ್ಬಂಧವಿಲ್ಲ.
ಆಕ್ಯುಪಂಚರ್ ಚಿಕಿತ್ಸೆ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಚಿರಪರಿಚಿತವಾಗಿರುವ ಒಂದು ವೈದ್ಯವಿಜ್ಞಾನ ಪದ್ಧತಿ. ಇದನ್ನು ಸೂಜಿ ಚಿಕಿತ್ಸೆ ಯೆಂತಲೂ ಕರೆಯಬಹುದು. ಸಾಂಪ್ರದಾಯಿಕ ವೈದ್ಯಪ್ರಕಾರಗಳಲ್ಲಿ ಅತ್ಯಂತ ಪ್ರಾಚೀನವಾದ ಈ ಆಕ್ಯುಪಂಚರ್ ಸುಮಾರು 2,000 ವರ್ಷಗಳ ಇತಿಹಾಸ ಹೊಂದಿದೆ. ಆಕ್ಯುಪಂಚರ್ ಬಗ್ಗೆ ಮೊದಲ ಬರಹದಾಖಲಾಗಿದ್ದು ‘ದಿ ಎಲ್ಲೋ ಎಂಪರರ್ಸ್ ಕ್ಲಾಸಿಕ್ ಆಫ್ ಇಂಟರ್‌ನಲ್‌ಮೆಡಿಸನ್’ ಎಂಬ ಪುಸ್ತಕದಲ್ಲಿ. ಆಗಿನ ಚೀನಾದ ಹಳದಿ ದೊರೆಗಳೆಂದೇ ಪ್ರಖ್ಯಾತರಾಗಿದ್ದ 100 ಬಿ.ಸಿ. ಕಾಲದಲ್ಲಿ, ‘‘ಹ್ಯೂಯಾಂಗ್ ಡಿ ನೀಜೆಂಗ್’’ ಎಂಬ ದೊರೆಯ ಮಂತ್ರಿ ಖೀ ಬೋ ಮನುಷ್ಯನ ದೇಹರಚನೆಹಾಗೂ ಅನಾರೋಗ್ಯಗಳು ಕುರಿತಂತೆ ತನ್ನ ರಾಜನ ಪ್ರಶ್ನೆಗಳಿಗೆ ಉತ್ತರಿ ಸುತ್ತಾ ಹೋಗುತ್ತಾನೆ. ಅದನ್ನು ಹಾಗೆಯೇ ಸಂಭಾಷಣೆಯ ರೂಪದಲ್ಲಿ ದಾಖಲಿಸಲಾಗಿದೆ. ಈ ಪುಸ್ತಕವು ಪ್ರಪಂಚ ದಲ್ಲೇ ಪುರಾತನವಾದ ಮೊದಲ ವೈದ್ಯ ಪುಸ್ತಕಗಳಲ್ಲಿ ಒಂದು ಎಂಬ ಉಲ್ಲೇಖವಿದೆ.
ಅತ್ಯಂತ ವೇಗವಾಗಿ ಹಾಗೂ ದೈತ್ಯಾಕಾರದಲ್ಲಿ ಬೆಳೆದ ಪಾಶ್ಚಾತ್ಯ ವೈದ್ಯಕೀಯ ಪದ್ಧತಿ, ತನ್ನ ಕಬಂಧ ಬಾಹುಗಳಿಂದ ವಿಶ್ವವನ್ನೇ ಅಪ್ಪಿತ್ತು.ಆಗ ಚೀನಾವು ಇದಕ್ಕೆ ಹೊರತಾಗಿರಲಿಲ್ಲ. ಆಗ ಅಲ್ಲಿ ಅನಾದಿಕಾಲದಿಂದ ಲೂ ರೂಢಿಯಲ್ಲಿದ್ದ ಆಕ್ಯುಪಂಚರ್ ಸ್ವಲ್ಪ ಮಟ್ಟಿಗೆ ಕಡೆಗಣಿಸಲ್ಪಟ್ಟಿತ್ತು.
1368-1644 ರ ಕಾಲಾವಧಿಯಲ್ಲಿ ಮಿಂಗ್ ವಂಶದ ಆಳ್ವಿಕೆಯಕಾಲಾವಧಿಯಲ್ಲಿ ಒಮ್ಮೆ ಪ್ರಕಟವಾದ The Great compen dium of Acupuncture and moxibuetion ಎಂಬ ಲೇಖನವು ಆಧುನಿಕ ಆಕ್ಯುಪಂಕ್ಚರ್ ಪದ್ಧತಿಗೆ ಬುನಾದಿಯಾಯಿತು. 1949ರಲ್ಲಿ ಕಮ್ಯುನಿಸ್ಟ್ ಸರಕಾರ ಅಧಿಕಾರಕ್ಕೆ ಬಂದಾಗ ಮತ್ತೆ ತನ್ನ ಸ್ಥಾನ ವನ್ನು ಮರಳಿ ಪಡೆಯಿತು.
16ನೆ ಶತಮಾನದಲ್ಲಿ ಜಪಾನ್ ಮತ್ತು ಕೊರಿಯಗಳು ಆಕ್ಯುಪಂಚರ್ ಮತ್ತು ಗಿಡಮೂಲಿಕೆಗಳನ್ನು ಅವರ ವೈದ್ಯಪದ್ಧತಿಯಲ್ಲಿ ಅಳವಡಿಸಿಕೊಂಡರು. ಇಂದಿಗೂ ಅದನ್ನು ಪಾಶ್ಚಾತ್ಯ ವೈದ್ಯಪ್ರಕಾರಕ್ಕೆ ಸಮಾನಾಂತರವಾಗಿ ಉಳಿಸಿಕೊಂಡು ಬಂದಿದ್ದಾರೆ.
1971ರಲ್ಲಿ ಅಮೆರಿಕೆಯ ಪತ್ರಕರ್ತರೊಬ್ಬರು ಚೀನಾಗೆ ಭೇಟಿ ನೀಡಿದ್ದಸಂದರ್ಭದಲ್ಲಿ, ಅಪೆಂಡಿಕ್ಸ್ ತೊಂದರೆಯಿಂದ ಬಳಲುತ್ತಿದ್ದು ತಕ್ಷಣವೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯ ನಂತರ ನೋವು ಶಮನಕ್ಕೆ ಆಕ್ಯುಪಂಚರ್ ಚಿಕಿತ್ಸೆಯನ್ನು ಸಹ ಮಾಡಲಾಗುತ್ತದೆ. ಅದರಿಂದ ಅವರಿಗೆ ನೋವು ನಿವಾರಣೆಯಲ್ಲಿ ಆಕ್ಯುಪಂಚರ್ ಎಷ್ಟು ಪರಿಣಾಮಕಾರಿ ಎಂಬುದರ ಅರಿವಾಗಿ ತನ್ನ ದೇಶಕ್ಕೆ ಮರಳಿದ ನಂತರ,ಅಲ್ಲಿನ ಪ್ರಸಿದ್ಧ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ನಲ್ಲಿ ತನಗಾದ ಅನುಭವದಬಗ್ಗೆ ಬರೆಯುತ್ತಾರೆ. ಇದರಿಂದ ಉತ್ತೇಜನಗೊಂಡು ಒಂದು ವೈದ್ಯರ- ವಿಜ್ಞಾನಿಗಳ ತಂಡವೇ, ಇದರ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಲು ಚೀನಾಕ್ಕೆ ತೆರಳುತ್ತದೆ. ಅವರು ನಡೆಸಿದ ಸಂಶೋಧನೆ ಗಳಿಂದ ಆಕ್ಯುಪಂಚರ್‌ನ ಕಾರ್ಯವೈಖರಿ ಹಾಗೂ ನೋವು ನಿವಾರಣೆಯಲ್ಲಿ ಅದರ ಮಹತ್ವವನ್ನು ದೃಢಪಡಿಸಿಕೊಳ್ಳುತ್ತಾರೆ. ನಂತರ ಪಾಶ್ಚಾತ್ಯ ದೇಶಗಳಲ್ಲೂ ವ್ಯಾಪಕವಾಗಿ ತಮ್ಮ ವೈದ್ಯಪದ್ಧತಿಯಲ್ಲಿ ಆಕ್ಯುಪಂಚರ್ ಅಳವಡಿಸಿಕೊಳ್ಳಲು ಪ್ರಾರಂಭಿಸುತ್ತಾರೆ. ಮುಖ್ಯವಾಗಿ ಅರಿವಳಿಕೆ (Acupuncture Analgesia) ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ಮಹತ್ವದ ಪಾತ್ರ ಪಡೆದುಕೊಂಡಿತು. ಇದು ಅಲ್ಲಿಯವರೆಗೂ ಬಳಸುತ್ತಿದ್ದ ಅಲೋಪತಿ ಅರಿವಳಿಕೆಗಿಂತ ಭಿನ್ನವಾಗಿದ್ದು, ಅದರಿಂದಅನುಭವಿಸುತ್ತಿದ್ದ ಅಡ್ಡ ಪರಿಣಾಮಗಳ ಪ್ರಮಾಣ ತುಂಬಾ ಗಣನೀಯವಾಗಿ ಕಡಿಮೆಯಾಯಿತು. ಶಸ್ತ್ರಚಿಕಿತ್ಸೆಗೆ ಒಳಪಡುವ ವ್ಯಕ್ತಿಯು ರಕ್ತ ಕಳೆದುಕೊಳ್ಳುವ ಪ್ರಮಾಣ ಕೂಡ ಇದರಿಂದಾಗಿ ತುಂಬಾ ಕಡಿಮೆ ಪ್ರಮಾಣದಲ್ಲಿದ್ದುದರಿಂದ, ರೋಗಿಯು ರಕ್ತಕ್ಕಾಗಿ ಪರದಾಡುವುದು ತಪ್ಪಿತು. ಶಸ್ತ್ರಕ್ರಿಯೆಗೆ ಒಳಗಾದ ವ್ಯಕ್ತಿ (ಪ್ರಜ್ಞಾವಸ್ಥೆಯಲ್ಲೇ ಇರುವು ದರಿಂದ) ಪ್ರಜ್ಞೆ ಕಳೆದುಕೊಳ್ಳಬೇಕಾಗಿ ರಲಿಲ್ಲ. ಚಿಕಿತ್ಸೆಯ ನಂತರ ಅನು ಭವಿಸಬೇಕಾಗಿದ್ದ ವಾಂತಿ, ತಲೆಸುತ್ತು, ಪ್ರಜ್ಞೆ ಮರಳಿ ಬಾರದಿರುವ ಭೀತಿಈ ಎಲ್ಲವೂ ನಿವಾರಣೆಯಾಯಿತು. ಇಂದಿಗೂ ಅಮೆರಿಕ ಮತ್ತು ಬ್ರಿಟನ್ ಗಳಲ್ಲಿ ಆಕ್ಯುಪಂಚರ್ ಅನಾಲ್ಜಸಿಯಾ ಅಗ್ರಸ್ಥಾನ ಪಡೆದುಕೊಂಡಿದೆ.
ಇನ್ನು ಇದರ ಕಾರ್ಯವೈಖರಿಗೆ ಬಂದಾಗ, ನಮಗೆಲ್ಲಾ ಗೊತ್ತಿರುವಹಾಗೆ ಸೃಷ್ಟಿಯಲ್ಲಿರುವ ಪ್ರತಿಜೀವಿಯ ರಚನೆಯೂ ಪಂಚಭೂತಗಳಿಂದಾಗಿದೆ. ಪ್ರತಿಜೀವಿಯ ಅಂಗಾಂಗಗಳಲ್ಲಿ ಈ ಪಂಚಭೂತಗಳ ಅಂಶ ಸಮಪ್ರಮಾಣದಲ್ಲಿರಬೇಕು. ಪ್ರತಿಜೀವಿಯ ಪ್ರತೀ ಕೋಶದಲ್ಲಿ ಯೂ ಒಂದು ಅದ್ಭುತವಾದ ಶಕ್ತಿ ಇರುತ್ತದೆ. ಆಕ್ಯುಪಂಚರ್ ಪದ್ಧತಿ ಯಲ್ಲಿಅದು ‘ಛೀ ಶಕ್ತಿ’ ಎಂದು ಕರೆಯಲ್ಪಡುತ್ತದೆ. ಈ ಛೀ ಶಕ್ತಿಯು ಜೀವಚಲನೆಗಳಿಗೆ ಅವಶ್ಯವಾಗಿ ಬೇಕಾದ ತಾತ್ವಿಕ, ಭಾವನಾತ್ಮಕ, ಬೌದ್ಧಿಕ ಹಾಗೂ ಭೌತಿಕ ಅಂಶಗಳನ್ನು ಒಳಗೊಂಡಿದೆ. ಜೀವಿಯ ಆರೋಗ್ಯವು ಈ ಛೀಶಕ್ತಿಯ ಹರಿವಿನ ಮೇಲೆ ನಿರ್ಧಾರವಾಗುತ್ತದೆ. ಈ ಛೀ ಎನರ್ಜಿ ಹರಿಯುವಿಕೆಯಲ್ಲಿ ಅಡೆತಡೆ, ಛೀ ಶಕ್ತಿಯ ಕೊರತೆ, ಅಸಮತೋಲನ ಉಂಟಾದರೆಇದು ಕಾಯಿಲೆ ರೂಪದಲ್ಲಿ ವ್ಯಕ್ತಿಯ ಅನುಭವಕ್ಕೆ ಬರುತ್ತದೆ.
ಇದರೊಡನೆ ಸಮಾನವಾಗಿ ಕಾರ್ಯನಿರ್ವಹಿಸುವ ಇನ್ನೊಂದು ಅದ್ಭುತ ಶಕ್ತಿ ಯಾವುದೆಂದರೆ ಯಿನ್ ಆ್ಯಂಡ್ ಯಾಂಗ್ ಎನರ್ಜಿ. ‘ಯಿನ್ ಮತ್ತು ಯಾಂಗ್’’ ಎಂದರೆ (yin & yang energy)ಇದು ಒಂದು ಧನಾಂಶವನ್ನು ಇನ್ನೊಂದು ಋಣಾಂಶವನ್ನು ಹೊಂದಿದ್ದು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುತ್ತವೆ. ದೇಹದ ಸಮತೋಲನೆಗೆ ಈ ಎರಡೂ ಶಕ್ತಿಯು ಸಮಪ್ರಮಾಣದಲ್ಲಿ ಬೇಕಾಗುತ್ತದೆ. ಛೀ ಶಕ್ತಿಯ ಹರಿಯುವಿಕೆಯಲ್ಲಿ ವ್ಯತ್ಯಾಸವಾದಲ್ಲಿ ಪ್ರಮಾಣದಲ್ಲೂ ವ್ಯತ್ಯಾಸವುಂಟಾಗುತ್ತದೆ. ನಾವಿದನ್ನು ಯಿನ್ ಅನ್ನು ಸ್ತ್ರಿ ಎಂತಲೂ ಯಾಂಗ್ ಅನ್ನು ಪುರುಷಶಕ್ತಿ ಎಂತಲೂ ಪರಿಭಾವಿಸಬಹುದು. ಯಿನ್ ಆ್ಯಂಡ್ ಯಾಂಗ್ ಒಂದು ರೀತಿ ಅರ್ಧ ನಾರೀಶ್ವರ ಪರಿಕಲ್ಪನೆಗೆ ಸಮೀಪವಾಗಿದೆ.
ನಮ್ಮ ದೇಹದಲ್ಲಿರುವ 12 ಒಳಾಂಗಗಳಿಗೆ ಸಂಬಂಧಪಟ್ಟಂತೆ 12 ಜೊತೆ ಮೆರಿಡಿಯನ್‌ಗಳು ಶಕ್ತಿ ಪ್ರವಹಿಸುವ ಕಾಲುವೆಗಳು ದೇಹದ ಎಡ ಮತ್ತು ಬಲ ಭಾಗದಲ್ಲಿ ಮಧ್ಯರೇಖೆಗೆ ಸಮಾನವಾಗಿವೆ. ಮತ್ತೆರಡು ವಿಶೇಷ ಮೆರಿಡಿಯನ್‌ಗಳು ದೇಹದ ಮುಂಭಾಗ ಮತ್ತು ಹಿಂಭಾಗದ ಮಧ್ಯಭಾಗದಲ್ಲಿದೆ.
ಈ ಛೀ ಎನರ್ಜಿಯು ನಿರಂತರವಾಗಿ ಮೆರಿಡಿಯನ್ ಮುಖಾಂತರ, ಮೇಲೆ ಕೆಳಗೆ ಚಲಿಸುತ್ತಿರುತ್ತದೆ.
ಇದರಲ್ಲಿ ಏನಾದರು ವ್ಯತ್ಯಾಸವಾದಲ್ಲಿ ಯಿನ್ ಆ್ಯಂಡ್ ಯಾಂಗ್‌ನಲ್ಲೂ ಸಮತೋಲನ ತಪ್ಪುತ್ತದೆ. ಇದೇ ಎಲ್ಲಾ ರೋಗಗಳಿಗೂ ನಾಂದಿ. ಯಿನ್ ಆ್ಯಂಡ್ ಯಾಂಗ್‌ನ ಈ 12 ಸಾಮಾನ್ಯ ಮೆರಿಡಿಯನ್‌ಗಳ ಮೇಲೆ ಅಂದರೆ ಆಕ್ಯುಪಂಚರ್‌ನ ಆಕ್ಯುಬಿಂದುಗಳಿರುತ್ತವೆ.
ಈ ಬಿಂದುಗಳನ್ನು ಗುರುತಿಸಿ, ಅವುಗಳನ್ನು ಆಕ್ಯುಪಂಚರ್ ಸೂಜಿಗಳಿಂದ ಚುಚ್ಚುವು ದರಿಂದ, ಒತ್ತಡ ಹಾಕುವುದರಿಂದ, ಶಾಖ ನೀಡುವುದರಿಂದ ಹಾಗೂ ನಿರ್ವಾತ (cupping)ಪ್ರಚೋದನೆಗೊಂಡು ಅವುಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ಇದರಿಂದ ಶಕ್ತಿಯು ಹರಿವು ಚುರುಕುಗೊಂಡು, ಸಮತೋಲನವೇರ್ಪಡುತ್ತದೆ.
ಈ ಆಕ್ಯುಪಂಚರ್ ಚಿಕಿತ್ಸಾ ಪದ್ಧತಿಯಿಂದ ಅನೇಕ ಕಾಯಿಲೆಗಳಿಗೆ ಚಿಕಿತ್ಸೆಯನ್ನು ನೀಡಬ ಹುದಾಗಿದೆ. ಅವುಗಳಲ್ಲಿ ಪ್ರಮುಖವಾಗಿ ಕತ್ತುನೋವು, ಬೆನ್ನು, ಕೆಳಬೆನ್ನು ನೋವು, ಸಂದುಗಳ ನೋವು, ಮಂಡಿನೋವು, ಮಾಂಸಖಂಡಗಳ ಸೆಳೆತ ಎಲ್ಲಾ ರೀತಿಯಾದ ತಲೆನೋವು, ಒತ್ತಡದಿಂದ ಬಂದ ತಲೆನೋವು. ಉದ್ವೇಗದಿಂದ ಹಾಗೂ ಒತ್ತಡಗಳಿಂದ ಬರುವಂತ ಸ್ಕಿಜೋಫ್ರಿನಿಯ ಮತ್ತು ಖಿನ್ನತೆಗಳಿಗೆ ಚಿಕಿತ್ಸೆ ನೀಡಬಹುದು.
ಸ್ತ್ರೀಯರಿಗೆ ಸಂಬಂಧಪಟ್ಟ ಋತುಚಕ್ರದ ಸಮಸ್ಯೆಗಳು, ಚೋದಕಗಳ ಏರುಪೇರಿನಿಂದ ಬರುವಂತಹ ನಿರ್ನಾಳ ಗ್ರಂಥಿಗಳ ಕಾರ್ಯದಲ್ಲಿ ಏರುಪೇರು. ಉದಾ:- ಥೈರಾಯ್ಡೆ, ಸಕ್ಕರೆ ಕಾಯಿಲೆ,ಹೈಪರ್‌ಟೆನ್ಷನ್‌ಗಳನ್ನು ಆಕ್ಯುಪಂಚರ್ ಮೂಲಕ ಯಶಸ್ವಿಯಾಗಿ ನಿಯಂತ್ರಣದಲ್ಲಿಡಬಹುದು. ನರಸಂಬಂಧಿ ರೋಗಗಳಾದ ಪಾರ್ಕಿನ್ ಸೋನಿಸಂ, ಲಕ್ವ, ಕಿವಿಗೆ ಸಂಬಂಧಪಟ್ಟ ರೋಗ ಗಳು, ತಲೆ ಮತ್ತು ದೇಹದ ಸಮತೋಲನೆ ಯನ್ನು ಕಳೆದುಕೊಳ್ಳು ವುದು, ಸಯಾಟಿಕ್ ನರದ ತೊಂದರೆ, ಕೈಗಳ ಚಲನೆ ಕುಂಠಿತಗೊ ಳ್ಳುವುದು, ಬಹುತೇಕ ಎಲ್ಲರನ್ನು ಕಾಡುವ ಅಜೀರ್ಣ, ಹುಳಿತೇಗು, ಹೊಟ್ಟೆಯ ಮತ್ತು ಕರುಳಿನ ಅಲ್ಸರ್, ಅಲರ್ಜಿಯಿಂದಾಗುವ ಸಮಸ್ಯೆಗಳಾದ ಅಸ್ತಮಾ, ತುರಿಕೆಯಿಂದ ಕಣ್ಣು ಕೆಂಪಾಗುವುದು ಮತ್ತು ಕಣ್ಣು ಮೂಗಿನಿಂದ ನೀರು ಸುರಿಯುವುದು...ಹೀಗೆ
ಹೇಳುತ್ತಾ ಹೋದರೆ ಪಟ್ಟಿ ಮುಗಿಯುವುದಿಲ್ಲ. ಕ್ಯಾನ್ಸರ್ ರೋಗದಿಂದ ನರಳುವವರಿಗೂ ನೋವು ನಿವಾರಣೆಗಾಗಿ ಆಕ್ಯುಪಂಚರ್ ಬಳಸಬಹುದಾಗಿದೆ.

ಈ ಚಿಕಿತ್ಸೆಯ ಇನ್ನೊಂದು ವಿಶೇಷವೆಂದರೆ ಯಾವುದೇ ಅಡ್ಡಪರಿಣಾಮಗಳಿಲ್ಲದಿರುವುದು ಹಾಗೂ ಕೃತಕ ಔಷಧಗಳ ಬಳಕೆ ಇಲ್ಲದಿರುವುದು, ಆದರೆ ಈ ಚಿಕಿತ್ಸೆಯನ್ನು ಸಾಂಪ್ರದಾಯಿಕ ವೈದ್ಯಪ್ರಕಾರಗಳಾದ ಆಯುರ್ವೇದ, ಹೋಮಿಯೋಪತಿ, ಯುನಾನಿ, ಹಾಗೂ ಸಿದ್ಧ ಔಷಧ ಗಳೊಡನೆ ಬಳಸಬಹುದಾಗಿದೆ. ಏಕೆಂದರೆ ಇಲ್ಲಿ ಬಳಸುವ ಔಷಧಿಗಳು ಗಿಡಮೂಲಿಕೆಗಳಾಗಿದ್ದು ನಮ್ಮ ಆಹಾರದ ಭಾಗವೇ ಆದ್ದರಿಂದ ಇವುಗಳ ಬಳಕೆಗೆ ನಿರ್ಬಂಧವಿಲ್ಲ. ನಮ್ಮ ದೇಹದಲ್ಲಿರುವ 14 ಮೆರಿಡಿಯನ್‌ಗಳ ಮೇಲೆ ಒಟ್ಟು 365 ಬಿಂದುಗಳನ್ನು ಗುರುತಿಸಲಾಗಿದೆ. ಇವುಗಳನ್ನು ಬಳಸಿ ಮಾಡುವ ಚಿಕಿತ್ಸೆಗೆ ಬಾಡಿ ಆಕ್ಯುಪಂಚರ್ ಎಂದು ಹೆಸರು.
ಹಾಗೇ ಇಡೀ ದೇಹದ ಸಂಕ್ಷಿಪ್ತ ರೂಪವೇ ನಮ್ಮ ಕಿವಿಗಳು. ಈ ಕಿವಿಗಳೂ ಸಹ ದೇಹದಲ್ಲಿ ಗುರುತಿಸಲ್ಪಟ್ಟ ಎಲ್ಲಾ ಮೆರಿಡಿಯನ್‌ಗಳು ಹಾಗೂ ಬಿಂದುಗಳನ್ನು ಹೊಂದಿರುವುದರಿಂದ ಕಿವಿಗಳನ್ನು ಬಳಸಿ ಸಹ ಆಕ್ಯುಪಂಚರ್ ಚಿಕಿತ್ಸೆಯನ್ನು ನೀಡಬಹುದಾಗಿದೆ.
ಈ ಚಿಕಿತ್ಸೆಯಲ್ಲಿ ಮಾಡುವ ಪ್ರಮುಖ ಪರೀಕ್ಷಾ ವಿಧಾನಗಳೆಂದರೆ ನಾಡಿ ಪರೀಕ್ಷೆ.
ನಾಡಿ ಪರೀಕ್ಷಿಸಿ ಚಿಕಿತ್ಸೆ ಮಾಡುವುದಕ್ಕೆ ಕ್ಲಾಸಿಕಲ್ ಆಕ್ಯುಪಂಚರ್ ಎಂದೂ, ರೋಗಲಕ್ಷಣ ಗಳಿಗೆ ಅನುಗುಣವಾಗಿ ಚಿಕಿತ್ಸೆ ಮಾಡುವುದಕ್ಕೆ ಕ್ಲಿನಿಕಲ್ ಆಕ್ಯುಪಂಚರ್ ಎಂದೂ ಕರೆಯುತ್ತಾರೆ. ಹಾಗೆ ಕಣ್ಣು, ಕಿವಿ, ನಾಲಿಗೆ, ನಾಭಿ ಇವುಗಳನ್ನು ಸಹ ಮುಖ್ಯ ಪರೀಕ್ಷಾ ವಿಧಾನಗಳಿಗೆ ಬಳಸಬ ಹುದಾಗಿದೆ. ಇಷ್ಟಾಗಿಯೂ ಎಲ್ಲರನ್ನು ಕಾಡುವ ಒಂದು ಪ್ರಶ್ನೆಯೆಂದರೆ ಆಕ್ಯುಪಂಚರ್ ಹೇಗೆ ಕೆಲಸ ಮಾಡುತ್ತದೆ ಎಂದು? ಇದಕ್ಕೆ ಹೀಗೇ ಎಂದು ನಿಖರವಾಗಿ ಹೇಳುವುದು ಕಷ್ಟ. ಆದರೂ ಒಂದು ಉದಾಹರಣೆಯ ಮೂಲಕ ವಿವರಿಸಲು ಪ್ರಯತ್ನಿಸಬಹುದು
ಉದಾ:- ಮಂಡಿನೋವಿನಿಂದ ಬಳಲುತ್ತಿರುವ ವ್ಯಕ್ತಿ, ಆಕ್ಯುಪಂಚರ್ ಚಿಕಿತ್ಸಕರ ಬಳಿ ಬಂದು ಕೇಳುವ ಪ್ರಶ್ನೆ,
‘ನನ್ನ ಮಂಡಿನೋವು ಈ ಸೂಜಿಗಳನ್ನು ಚುಚ್ಚುವುದರಿಂದ ಹೇಗೆ ಸರಿಹೋಗುತ್ತದೆ ನಾನು ಅಲೋಪತಿ ವೈದ್ಯರುಗಳ ಬಳಿ ಹೋದಾಗ ನನ್ನ ಎಂಆರ್‌ಐ ಸ್ಕ್ಯಾನ್ ನೋಡಿ ’ನಿನ್ನ ಮಂಡಿಮೂಳೆಸವೆದಿದೆ, ಅಲ್ಲಿರುವ ಸೈನೊವಿಯಲ್ ಪ್ಲೂಯಿಡ್ (ಚಲನೆಗೆ ಸಹಕಾರಿಯಾದ ಒಂದು ರೀತಿಯಅಂಟುದ್ರವ) ಅದೂ ಸಹ ಒಣಗಿಹೋಗಿದೆ. ಮಂಡಿಯ ಮೂಳೆಗಳು ಸವೆದಿವೆ’ ಎನ್ನುತ್ತಾರೆ ಇಷ್ಟೆಲ್ಲಾ ಸಮಸ್ಯೆಗಳು ಸೂಜಿ ಚುಚ್ಚುವುದರಿಂದ ಹೇಗೆ ಸರಿಹೋಗುತ್ತದೆ ಎಂದು.
ಆಗ ನಮಗೆ ಉಳಿಯುವ ಉತ್ತರ. ‘ಮೊದಲು ಚಿಕಿತ್ಸೆ ತೆಗೆದು ಕೊಂಡು ನೋಡಿ ಆ ಮೇಲೆ ಗುಣವಾಗುತ್ತೋ ಇಲ್ಲವೋ ನೋಡೋಣ’ ಎಂದು.
ಮಂಡಿ ಸುತ್ತಲೂ ಇರುವ ಕೆಲವು ಬಿಂದುಗಳು ಹಾಗೂ ಇನ್ನು ಕೆಲವು ಆ ಸ್ಥಳದಿಂದ ದೂರದಲ್ಲಿದ್ದರೂ ಈ ಕ್ರಿಯೆಗೆ ಸಹಾಯಕಾರಿ ಯಾಗಬಲ್ಲ ಕೆಲವು ಬಿಂದುಗಳನ್ನು ಸೂಜಿ ಚಿಕಿತ್ಸೆಯಿಂದ ಪ್ರಚೋದ ನೆಗೊಳಪಡಿಸಿದಾಗ, ಚರ್ಮದಲ್ಲಿರುವ ನರಗಳ ಮುಖಾಂತರ ಸಂದೇಶ ಮೆದುಳಿಗೆ ರವಾನೆಯಾಗುತ್ತದೆ. ನಂತರ ಪ್ರತಿಯಾಗಿ ದೊರೆತ ಆದೇಶದಂತೆ ಆ ಭಾಗಕ್ಕೆ ಶಕ್ತಿ ಸಂಚಾರ ತೀವ್ರಗೊಂಡು, ಬತ್ತಿಹೋದ ಸ್ಟೆನೊವಿಯಲ್ ಪ್ಲೂಯಿಡ್ ಸಹ ಸ್ಪುರಿಸಲು ಪ್ರಾರಂಭಿಸು ತ್ತದೆ. ಜೊತೆಗೆ ಉರಿ, ಊತ, ನೋವು ಎಲ್ಲದರಲ್ಲೂ ಗಣನೀಯ ಬದಲಾವಣೆ ಕಂಡುಬಂದು, ವ್ಯಕ್ತಿಗೆ ನೋವು ಕಡಿಮೆಯಾಗಿ ನೆಮ್ಮದಿ ಪಡೆಯುತ್ತಾರೆ. ಆಗ ರೋಗಿಗಳು ಯಾಕೆ ಹೇಗೆ ಎಂಬುದಕ್ಕೆ ಉತ್ತರ ಹುಡುಕುವ ಬದಲು, ಪರಿಹಾರ ಸಿಕ್ಕಿ ಖುಷಿಯಿಂದ ಚಿಕಿತ್ಸೆಯನ್ನು ಒಪ್ಪಿಕೊಳ್ಳಲು ಪ್ರಾರಂಭಿಸುತ್ತಾರೆ.
ಚಿಕಿತ್ಸೆಯ ಪ್ರಭಾವವು ಮನಸ್ಸು ಮತ್ತು ದೇಹದ ಮೇಲೆ ಸಮಗ್ರವಾಗಿ ಏಕಕಾಲದಲ್ಲಿ ಆಗುವುದರಿಂದ, ಇದರಿಂದ ದೊರೆಯುವ ಫಲಿತಾಂಶವು ಅತ್ಯುತ್ತಮವಾಗಿದ್ದು ಬೇರೆ ವೈದ್ಯ ಪ್ರಕಾರಗಳಿಗಿಂತ ಭಿನ್ನವಾಗಿಯೂ ಇದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದಿರುವುದು ಇದರ ಇನ್ನೊಂದು ಹೆಗ್ಗಳಿಕೆ.
ರೋಗಿಯನ್ನು ಕಾಡುವ ಮತ್ತೊಂದು ಪ್ರಶ್ನೆ, ನನ್ನ ಸಮಸ್ಯೆ ಸರಿಹೋಗುವುದಕ್ಕೆ ಎಷ್ಟು ದಿನಗಳ ಚಿಕಿತ್ಸೆ ಪಡೆಯಬೇಕಾಗುತ್ತದೆ? ಎಂಬುದು.
ಇದಕ್ಕೆ ಉತ್ತರ: ಕೆಲವು ಸಂದರ್ಭಗಳಲ್ಲಿ ಮೊದಲನೆ ಚಿಕಿತ್ಸೆಯಲ್ಲೇ ಫಲಿತಾಂಶ ಪಡೆಯುವ ಸಾಧ್ಯತೆಗಳಿರುತ್ತವೆ. ಹಾಗೆಯೇ ಇನ್ನೂ ಕೆಲವು ಸಂದರ್ಭಗಳಲ್ಲಿ ವ್ಯಕ್ತಿಯ ಜೀವನಶೈಲಿ, ಮಾನಸಿಕ ಸ್ಥಿತಿ, ದೈಹಿಕ ಸಾಮರ್ಥ್ಯ, ಎಷ್ಟು ಕಾಲದಿಂದ ತೊಂದರೆಗೊಳಗಾಗಿದ್ದಾರೆ ಹಾಗೂ ಚಿಕಿತ್ಸೆಗೆ ಅವರ ದೇಹ ಮತ್ತು ಮನಸ್ಸು ಸ್ಫಂದಿಸುವ ರೀತಿ ಮತ್ತು ಜೀವನಶೈಲಿಯನ್ನು ರೂಢಿಸಿಕೊಳ್ಳುವ ರೀತಿಯಿಂದಲೂ ಅವರ ಚಿಕಿತ್ಸಾವಧಿ ನಿರ್ಧಾರವಾಗುತ್ತದೆ.
ಆಕ್ಯುಪಂಚರ್ ಒಂದು ವಿಸ್ಮಯಕಾರಿ ಚಿಕಿತ್ಸಾ ಪದ್ಧತಿ.







