ಕೋಮು ಹಿಂಸಾಚಾರಕ್ಕೆ ಪ್ರಚೋದನೆ ಯತ್ನ: ಪ.ಬಂಗಾಲದಲ್ಲಿ ಓರ್ವನ ಬಂಧನ

ಕೋಲ್ಕತ, ಜು.8: ಕೋಮು ಹಿಂಸಾಚಾರ ಪ್ರಚೋದನೆಗೆ ಯತ್ನಿಸಿದ ಆರೋಪದಲ್ಲಿ ಪ.ಬಂಗಾಲದ 24 ಪರಗಣ ಜಿಲ್ಲೆಯ ಸೋನಾರ್‌ಪುರದಲ್ಲಿ ಓರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋನಾರ್‌ಪುರದ ರೂಪ್‌ನಗರ ನಿವಾಸಿ ಭಬತೋಶ್ ಚಟರ್ಜಿ(38 ವರ್ಷ) ಬಂಧಿತ ವ್ಯಕ್ತಿ. ಈತ ಸಿನೆಮದ ಛಾಯಾಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಇದು ಕೋಮುಗಲಭೆ ಪೀಡಿತ ಬದುರಿಯ ಗ್ರಾಮದಲ್ಲಿ ನಡೆದ ಘಟನೆಯ ಚಿತ್ರ ಎಂದು ಅಡಿಬರಹ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಚಟರ್ಜಿಯನ್ನು ಬಂಧಿಸಲಾಗಿದ್ದು ಆತನ ಮನೆಯಿಂದ ಒಂದು ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ವಶಕ್ಕೆ ಪಡೆಯಲಾಗಿದೆ. ನ್ಯಾಯಾಲಯ ಈತನಿಗೆ ಜುಲೈ 11ರವರೆಗೆ ಪೊಲೀಸ್ ಕಸ್ಟಡಿ ವಿಧಿಸಿದೆ ಎಂದವರು ತಿಳಿಸಿದರು.
Next Story





