ಟ್ರಂಪ್ ಆಸನದಲ್ಲಿ ಮಗಳು!

ಹ್ಯಾಂಬರ್ಗ್, ಜು. 8: ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗ ಸಮ್ಮೇಳನದ ಶನಿವಾರ ಕಲಾಪಗಳ ವೇಳೆ ಸ್ವಲ್ಪ ಸಮಯ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಅವರ ಪುತ್ರಿ ಇವಾಂಕಾ ಟ್ರಂಪ್ ಪ್ರತಿನಿಧಿಸಿ ಅಚ್ಚರಿ ಮೂಡಿಸಿದರು.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್, ಜರ್ಮನಿ ಚಾನ್ಸಲರ್ ಮರ್ಕೆಲಾ ಆ್ಯಂಜೆಲ್, ಬ್ರಿಟನ್ ಪ್ರಧಾನಿ ತೆರೇಸಾ ಮೇ ಹಾಗೂ ಇತರ ರಾಜತಾಂತ್ರಿಕರು ಕುಳಿತಿದ್ದ ಮೇಜಿನ ಸುತ್ತ 36 ವರ್ಷದ ಮಾಜಿ ರೂಪದರ್ಶಿ ಕುಳಿತುಕೊಂಡರು.
ಇದು ಟ್ರಂಪ್ ಟೀಕಾಕಾರರ ಅತೃಪ್ತಿಗೆ ಕಾರಣವಾಗಿದೆ.
Next Story





