Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಸ್ಮಾರ್ಟ್ ಫೋನುಗಳಲ್ಲಿ ಕನ್ನಡದ ಫಾಂಟ್,...

ಸ್ಮಾರ್ಟ್ ಫೋನುಗಳಲ್ಲಿ ಕನ್ನಡದ ಫಾಂಟ್, ಪೂರ್ಣಾಕ್ಷರ ರೆಂಡರಿಂಗ್ ಇಲ್ಲದ ಅವ್ಯವಸ್ಥೆ

ಡಿಜಿಟಲ್ ಕನ್ನಡ

ಎ. ಸತ್ಯನಾರಾಯಣಎ. ಸತ್ಯನಾರಾಯಣ9 July 2017 12:35 AM IST
share
ಸ್ಮಾರ್ಟ್ ಫೋನುಗಳಲ್ಲಿ ಕನ್ನಡದ ಫಾಂಟ್, ಪೂರ್ಣಾಕ್ಷರ ರೆಂಡರಿಂಗ್ ಇಲ್ಲದ ಅವ್ಯವಸ್ಥೆ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ‘‘ನಮಸ್ಕಾರ, ಚೆನ್ನಾಗಿದ್ದೀರಾ?, ಸ್ವಾತಂತ್ರ್ಯೋತ್ಸ ವದ ಶುಭಾಶಯಗಳು’’ ಎಂದು ಕನ್ನಡದಲ್ಲಿ ಸಂದೇಶವೊಂದನ್ನು ಉತ್ಸಾಹದಿಂದ ಬರೆದು ನಿಮ್ಮ ಸ್ನೇಹಿತರಿಗೆ ಗ್ರೂಪ್-ಮೆಸೇಜ್ ಆಗಿ ಕಳುಹಿಸುತ್ತೀರಿ ಎಂದಿಟ್ಟುಕೊಳ್ಳಿ. ಗ್ರೂಪಿನಲ್ಲಿರುವವರೊಬ್ಬರು ಫೋನ್ ಮಾಡಿ ‘‘ಅದೇನು ಕಳುಹಿಸಿದ್ದೀಯೋ ಮಾರಾಯ, ಮೆಸೇಜು ತುಂಬಾ ಚಿಕ್ಕಚಿಕ್ಕ ಡಬ್ಬಿಯಾಕಾರದ ಸಾಲುಗಳೇ ಇವೆಯಲ್ಲೋ ’’ಎಂದು ಹೇಳಬಹುದು. ತಮ್ಮ ಫೋನ್‌ನಲ್ಲಿ ‘‘ನಮಸ್‌ಕಾರ, ಚೆನ್‌ನಾಗಿದ್‌ದೀರಾ?, ಸ್‌ವಾತಂತ್‌ರ್‌ಯೋತ್‌ಸವದ ಶುಭಾಶಯಗಳು’’ ಎಂಬ ಸಂದೇಶ ನೋಡಿದ ಮತ್ತೊಬ್ಬರು ನಿಮಗೆ ಫೋನ್ ಮಾಡಿ ‘‘ಇದೆಂಥಾ ಕನ್ನಡವೋ? ಒತ್ತಕ್ಷರಗಳೇ ಇಲ್ಲದ ಮೆಸೇಜು ಕಾಣುತ್ತಿದೆ ಎಂದು ಹೇಳಬಹುದು. ಈ ಸಮಸ್ಯೆಗಳಿಗೆಲ್ಲಾ ನಿಮ್ಮ ಸ್ನೇಹಿತರ ಫೋನ್‌ಗಳಲ್ಲಿ ‘‘ಕನ್ನಡದ ಬೆಂಬಲ ಸರಿಯಾಗಿಲ್ಲ’’ ಎಂಬುದೇ ಕಾರಣ. ಕನ್ನಡ ಅಕ್ಷರಗಳನ್ನು ತೋರಿ ಸಲು ಮೊಬೈಲ್‌ನಲ್ಲಿ ಫಾಂಟು ಇಲ್ಲದಿದ್ದರೆ ಡಬ್ಬಿಗಳು ಮೂಡಿಬರುತ್ತವೆ. ಕನ್ನಡತೋರಿಸಲು ಫಾಂಟು ಇದ್ದು, ಕನ್ನಡದ ರೆಂಡರಿಂಗ್ ವ್ಯವಸ್ಥೆ ಇಲ್ಲದಿದ್ದರೆ, ಒತ್ತಕ್ಷರಗ ಳಿಲ್ಲದ ಸಂದೇಶ ಮೂಡುತ್ತದೆ. ಇದಕ್ಕೇನು ಪರಿಹಾರ?

ಬಳಕೆದಾರರಾದ ನಮ್ಮ ನಿಮ್ಮ ಕೈಯಲ್ಲಿ ಇವುಗಳಿಗೇನೂ ಪರಿಹಾರವಿಲ್ಲ. ಕಂಪ್ಯೂಟರಿನಲ್ಲಿ ಮಾಡಿದಂತೆ ಫಾಂಟನ್ನು ನಮ್ಮ ಮೊಬೈಲ್‌ಗೆ ನಾವೇ ಅಳವ ಡಿಸಿಕೊಳ್ಳಲು ಸಾಧ್ಯವಿಲ್ಲ. ತಿಳಿದವರು, ತಂತ್ರಜ್ಞರು ಮಾಡಿಕೊಡಬೇಕೆಂದರೆ, ಮೊಬೈಲ್‌ಸೆಟ್‌ನೊಳಗಿನ ಕಾರ್ಯಾಚರಣೆ ವ್ಯವಸ್ಥೆಗೆ (ಓ.ಎಸ್.) ಬೀಗಹಾಕಲಾಗಿರುತ್ತದೆ. ತಯಾರಕರ ಹೊರತಾಗಿ ಆ ಬೀಗದ ಕೀಲಿಕೈ ಯಾರಲ್ಲಿಯೂ ಇರುವುದಿಲ್ಲ. ಕಷ್ಟಪಟ್ಟು ಆ ಬೀಗವನ್ನು ಒಡೆದು ಒಳಗೆ ಹೋಗಿ ಫಾಂಟು ಅಳವಡಿಸಿದರೆ ಕೇವಲ ‘ಅಕ್ಷರ ತೋರಿಕೆ (ಡಿಸ್‌ಪ್ಲೇ)’ ಮಾತ್ರವೇ ಬರುತ್ತದೆಯೇ ಹೊರತು. ಒತ್ತಕ್ಷರಗಳ ಸಹಿತ ಕನ್ನಡವನ್ನು ಸರಿಯಾಗಿ ಟೈಪ್‌ಮಾಡಿ ಮೂಡಿಸಲು ಸಾಧ್ಯವಾಗುವುದಿಲ್ಲ. ‘ಪೂರ್ಣಾಕ್ಷರಗಳ ರೆಂಡರಿಂಗ್’ ವ್ಯವಸ್ಥೆಯನ್ನು ತಯಾರಕರು ಈ ಮೊದಲೇ ಸೆಟ್‌ನಲ್ಲಿ ಅಳವಡಿಸಿರದ ಹೊರತು, ‘ರೂಟಿಂಗ್’ ಎಂದು ಕರೆಯಲಾಗುವ ಕಳ್ಳಮಾರ್ಗಗಳ ಮೂಲಕ ತಜ್ಞರಿಂದ ಫಾಂಟು ಹಾಕಿಸಿಕೊಂಡರೂ ಅದು ಉಪಯೋ ಗಕ್ಕೆ ಬರುವುದಿಲ್ಲ. ಕನ್ನಡದ ಪದಗಳು ಒತ್ತಕ್ಷರಗಳ ಸಹಿತ ಸರಿಯಾಗಿ ಮೂಡಬೇಕೆಂದರೆ, ನಿಮ್ಮ ಸೆಟ್‌ಗಳಲ್ಲಿ ‘ಕ್ಯಾರೆಕ್ಟರ್ ರೆಂಡರಿಂಗ್ ವ್ಯವಸ್ಥೆ ಅಳವಡಿಸುವ ಹೊಣೆಗಾರಿಕೆ ಮೊಬೈಲ್ ಸೆಟ್ ತಯಾರಕರದ್ದು. ಖರೀದಿಯಾಗಿ ಬಳಕೆಯಲ್ಲಿರುವ ಸೆಟ್‌ಗಳತ್ತ ತಯಾರಕರು ಕಣ್ಣೆತ್ತಿಯೂ ನೋಡುವುದಿಲ್ಲ. ನಿಮ್ಮ ಈಗಿರುವ ಸ್ಮಾರ್ಟ್ ಫೋನಿನಲ್ಲಿ ಕನ್ನಡದ ಸಮಸ್ಯೆಗಳಿವೆ ಎಂದಾದರೆ, ನಿಮ್ಮ ಹಳೆಯ ಸೆಟ್‌ಗಳನ್ನು ಮೂಲೆಗೆ ಹಾಕಿ ಆಧುನಿಕವಾದ ಹೊಸ ಸೆಟ್‌ಗಳನ್ನು ಖರೀದಿಸುವುದೇ ಇದಕ್ಕಿರುವ ಪರಿಹಾರ.

ಮೊಬೈಲ್ ಪೋನು ರಿಂಗಣಿಸಿದಾಗ ‘ಹಲೋ..’ ಎಂದು ಹೇಳಿ ಮಾತಾಡಿ.. ಮಾತು ಮುಗಿಸಿ ಕಿಸೆಗಿಟ್ಟು ಮುಂದಿನ ಕೆಲಸ ನೋಡುವ ಕಾಲ ಎಂದಿಗೋ ಮುಗಿದು ಹೋಗಿದೆ. ಸ್ಮಾರ್ಟ್‌ಫೋನ್ ಎಂಬುದು ‘ಓದಲು, ನೋಡಲು’ ಅನುಕೂಲಗಳಿ ರುವ ಉಪಕರಣವಾದ ಮೇಲಂತೂ ವಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವಿಟರ್ ಇತ್ಯಾದಿಗಳಲ್ಲಿ ಮೆಸೇಜುಗಳನ್ನು ಓದಲು, ವೀಡಿಯೊಗಳನ್ನು ‘ನೋಡಲು’ ಸ್ಮಾರ್ಟ್ ಫೋನುಗಳು ಎಲ್ಲರ ಅಂಗೈಯಲ್ಲಿರುವ ಚಿಕ್ಕ ಕಂಪ್ಯೂಟರ್‌ಗಳೇ ಆಗಿಹೋಗಿವೆ. ಹೀಗಾಗಿ, ಕಂಪ್ಯೂಟರ್‌ಗಳಲ್ಲಿದ್ದಂತೆ ಈಗ ಸ್ಮಾರ್ಟ್ ಫೋನು ಗಳಲ್ಲಿಯೂ ಭಾಷೆಯ ಪ್ರಮೇಯ ಹೆಚ್ಚಾಗಿದೆ. ಈಗೇನೋ ಆ್ಯಂಡ್ರಾಯ್ಡಾ ಸ್ಮಾರ್ಟ್‌ಫೋನುಗಳ ಟಚ್‌ಸ್ಕ್ರೀನ್‌ಮೇಲೆ ಕೈಯಲ್ಲಿ ಬರೆದು ಕನ್ನಡವನ್ನು ಮೂಡಿಸುವ ‘‘ಹ್ಯಾಂಡ್‌ರೈಟಿಂಗ್ ಇನ್‌ಪುಟ್’’ ಬಂದಿದೆ. ಆದರೆ, ಫೋನ್ ತಯಾರಕರು ಕನ್ನಡವನ್ನು ಅಳವಡಿಸಿಕೊಡ ದಿದ್ದ ಕಾಲದಲ್ಲಿ ಕನ್ನಡ ತಂತ್ರಜ್ಞರು ದ್ರಾವಿಡ ಪ್ರಾಣಾಯಾಮ ಮಾಡಿ ಕನ್ನಡದ ಫಾಂಟನ್ನು ಫೋನ್ ಒಳಗೆ ಅಳವಡಿಸಿದ್ದ ಕಸರತ್ತು ಈಗ ಇತಿಹಾಸ.

ಕನ್ನಡದ ಉತ್ಸಾಹೀ ಕನ್ನಡ ತಂತ್ರಜ್ಞರು ಕಳ್ಳಮಾರ್ಗದಲ್ಲಿ ಹೋಗಿ ಫೋನ್‌ನ ಕಾರ್ಯಾಚರಣೆ ವ್ಯವಸ್ಥೆಯ (ಓ.ಎಸ್.ನ) ಬೀಗವನ್ನು ಒಡೆದು ಒಳನುಗ್ಗಿ ಅಕ್ಷರಗಳನ್ನು ಅಳವಡಿಸುವ ಕೆಲಸವನ್ನೂ ಮಾಡಿದ್ದಾರೆ. ಇದಕ್ಕೆ ‘‘ಮೊಬೈಲನ್ನು ರೂಟಿಂಗ್ ಮಾಡುವುದು’’ ಎಂದು ಕರೆಯಲಾಗುತ್ತದೆ. ಕನ್ನಡ ಭಾಷಿಕ ಫೋನ್ ಬಳಕೆದಾರರ ಮಾರುಕಟ್ಟೆಯನ್ನು ನಗದೀಕರಿಸಿಕೊಳ್ಳಲಾದರೂ, ಕನ್ನಡದ ಅಳವಡಿಸುವ ಶಾಸ್ತ್ರವನ್ನು ಮಾಡಿದ್ದ ಕೆಲವು ಸೆಲ್‌ಫೋನ್ ತಯಾರಕರು, ಸಂಪೂರ್ಣವಾಗಿ ಕನ್ನಡ ಬೆಂಬಲವನ್ನು ನೀಡಿರಲಿಲ್ಲ. ಬಹುರಾಷ್ಟ್ರೀಯ ಕಂಪೆನಿಯಾದ ಗೂಗಲ್, ಭಾರತೀಯ ಭಾಷೆಗಳನ್ನು ಅಳವಡಿಸುವ ಮೂಲಕ ತನ್ನ ಮಾರುಕಟ್ಟೆಯನ್ನು ಉತ್ತಮಪಡಿಸಿಕೊಳ್ಳಬಹುದು ಎಂದು ಮೊದಲಿಗೆ ಅರಿತುಕೊಂಡು ಕಾರ್ಯೋನ್ಮುಖವಾಯಿತು.

ಭಾರತೀಯ ಭಾಷೆಗಳಿಗೆ ಮೊದಲಿಗೆ ‘‘ಗೂಗಲ್ ಇಂಡಿಕ್ ಕೀಬೋರ್ಡ್ ಎಂಬ ಟೈಪಿಂಗ್ ಆ್ಯಪ್’’ ಬಿಡುಗಡೆ ಮಾಡಿತು. ನಂತರ, ಎರಡು ವರ್ಷಗಳ ಹಿಂದೆ ‘‘ಹ್ಯಾಂಡ್‌ರೈಟಿಂಗ್ ಇನ್‌ಪುಟ್’’ ಎಂಬ ಹೆಸರಿನ ಕೈಬರಹದ ಆ್ಯಪ್ ಬಿಡುಗಡೆ ಮಾಡಿತು.

share
ಎ. ಸತ್ಯನಾರಾಯಣ
ಎ. ಸತ್ಯನಾರಾಯಣ
Next Story
X