ರಸ್ತೆ ಅಪಘಾತ: ಓಮ್ನಿ ಚಾಲಕ ಸ್ಥಳದಲ್ಲೇ ಮೃತ್ಯು

ಹಾನೂರು, ಜು. 9: ಸತ್ತೇಗಾಲದ ಬಳಿ ಲಾರಿ, ಬಸ್ ಮತ್ತು ಓಮ್ನಿ ಕಾರು ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಿಂದ ಓಮ್ನಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಎಂದು ತಿಳಿದುಬಂದಿದೆ.
ಮೃತ ಓಮ್ನಿ ಚಾಲಕನನ್ನು ಉದಯ್ (35) ಎಂದು ಗುರುತಿಸಲಾಗಿದೆ.
ಓಮ್ನಿಯಲ್ಲಿ ಪ್ರಯಾಣಿಸುತ್ತಿದ್ದ ಆನೇಕಲ್ ಪಟ್ಟಣ ನಿವಾಸಿಗಳಾದ ಭಾಗ್ಯ (50), ಚಂದ್ರಶೇಖರಯ್ಯ (58), ಕಾವ್ಯ (20) ಅಪಘಾತದಿಂದ ಗಾಯಗೊಂಡವರು ಎಂದು ಗುರುತಿಸಲಾಗಿದೆ.
ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ಅಮರ್ ನಾರಾಯಣ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.
Next Story





