ಕುತ್ತಾರು: ಯುವಕನ ಮೇಲೆ ದಾಳಿಗೆ ಡಿವೈಎಫ್ಐ ಖಂಡನೆ
ಮಂಗಳೂರು, ಜು. 9: ಅಂಬ್ಲಮೊಗರು ಗ್ರಾಮದ ಚಿರಂಜೀವಿ ಎಂಬ ಅಮಾಯಕ ಯುವಕನ ಮೇಲೆ ದುಷ್ಕರ್ಮಿಗಳು ನಡೆಸಿದ ದಾಳಿಯನ್ನು ಡಿವೈಎಫ್ಐ ಉಳ್ಳಾಲ ವಲಯ ಖಂಡಿಸಿದೆ.
ಚಿರಂಜೀವಿ ಯಾವುದೇ ಸಂಘಟನೆಯಲ್ಲಿ ಇಲ್ಲದೆ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿರುವ ಯುವಕ. ನಿನ್ನೆ ಕೂಡ ಕೆಲಸ ಮಾಡಿ ಬರುವಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಈ ಅಮಾಯಕ ಯುವಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಪೊಲೀಸ್ ಇಲಾಖೆ ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ ಕಾನೂನುಕ್ರಮ ಕೈಗೊಳ್ಳಬೇಕು. ಅಲ್ಲದೆ ಅಮಾಯಕರ ಮೇಲಿನ ಈ ರೀತಿಯ ದಾಳಿ ಇನ್ನು ಮುಂದೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಎಂದು ಡಿವೈಎಫ್ಐ ಒತ್ತಾಯಿಸಿದೆ. ಇದಕ್ಕಿಂತ ಮೊದಲು ಕುತ್ತಾರಿನ ಗಂಗಾಧರ ಎಂಬವರಿಗೆ ಇದೇ ರೀತಿ ಹಲ್ಲೆ ನಡೆಸಿ ಪರಾರಿಯಾಗಿದ್ದರೆ ಆ ಹಲ್ಲೆಕೊರರನ್ನು ಕೂಡ ಈವರೆಗೆ ಪೊಲೀಸ್ ಇಲಾಖೆ ಬಂಧಿಸಲು ವಿಫಲರಾಗಿದ್ದಾರೆ. ಈ ರೀತಿ ಹಲ್ಲೆ ನಡೆಸಿ ಆಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವ ದುಷ್ಕರ್ಮಿಗಳನ್ನು ಕೂಡಲೆ ಬಂಧಿಸಿ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಪ್ರತಿಭಟನೆ ಎದುರಿಸ ಬೇಕಾದಿತು ಎಂದು DYFI ವಲಯ ಕಾರ್ಯದರ್ಶಿ ಜೀವನ್ ರಾಜ್ ಕುತ್ತಾರ್ ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.