ಚೆಕ್ ಪೋಸ್ಟ್ ಗಳಲ್ಲಿ ವಾಹನ ನಿಲ್ಲಿಸದೆ ಪರಾರಿಯಾದರೆ ಗುಂಡಿಕ್ಕಿ: ಐಜಿಪಿ ಹರಿಶೇಖರನ್ ಸೂಚನೆ
ದ.ಕ. ಜಿಲ್ಲೆಯಲ್ಲಿ ಅಹಿತಕರ ಘಟನೆಗಳ ಹಿನ್ನೆಲೆ

ಮಂಗಳೂರು, ಜು.7: ದ.ಕ.ಜಿಲ್ಲೆಯಲ್ಲಿ ಪದೇ ಪದೇ ಅಹಿತಕರ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ 26 ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ವಾಹನಗಳ ತಪಾಸಣೆಗಾಗಿ ಈ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದ್ದು, ತಪಾಸಣೆಗೆ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದರೆ ವಾಹನಗಳಿಗೆ ಗುಂಡಿಕ್ಕಲು ಪಶ್ಚಿಮವಲಯ ಐಜಿಪಿ ಹರಿಶೇಖರನ್ ಹೇಳಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಒಂದು ವೇಳೆ ತಪಾಸಣೆಯ ಸಂದರ್ಭ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಲ್ಲಿ ಫೈರ್ ಓಪನ್ ಮಾಡಿ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
Next Story





