Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಹೆಣ್ಣು ಮಗುವನ್ನು ಹೆತ್ತ ಬ್ರಿಟನ್‌ನ...

ಹೆಣ್ಣು ಮಗುವನ್ನು ಹೆತ್ತ ಬ್ರಿಟನ್‌ನ ಮೊದಲ ‘ಗರ್ಭವಂತ’ ಪುರುಷ

ವಾರ್ತಾಭಾರತಿವಾರ್ತಾಭಾರತಿ9 July 2017 3:28 PM IST
share
ಹೆಣ್ಣು ಮಗುವನ್ನು ಹೆತ್ತ ಬ್ರಿಟನ್‌ನ ಮೊದಲ ‘ಗರ್ಭವಂತ’ ಪುರುಷ

ಲಂಡನ್,ಜು.9: 21ರ ಹರೆಯದ ಯುವಕನೋರ್ವ ಮಗುವಿಗೆ ಜನ್ಮ ನೀಡಿದ ಬ್ರಿಟನ್‌ನ ಮೊದಲ ವ್ಯಕ್ತಿಯೆಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ವೀರ್ಯದಾನಿಯ ಮೂಲಕ ಗರ್ಭ ಧರಿಸಲೆಂದೇ ಈತ ತನ್ನ ಲಿಂಗ ಬದಲಾವಣೆಯನ್ನು ಮುಂದೂಡಿದ್ದ.

ವೀರ್ಯದಾನಿಯ ಮೂಲಕ ತಾನು ಗರ್ಭ ಧರಿಸಿದ್ದೇನೆಂದು ಪ್ರಕಟಿಸುವ ಮೂಲಕ ಹೇಡೆನ್ ಕ್ರಾಸ್ ಈ ವರ್ಷದ ಆರಂಭದಲ್ಲಿ ವಿಶ್ವಾದ್ಯಂತ ಸುದ್ದಿಯಾಗಿದ್ದ. ಕಳೆದ ತಿಂಗಳು ಈತ ಆರೋಗ್ಯವಂತ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾನೆ. ತನ್ನ ಪುತ್ರಿ ಟ್ರಿನಿಟಿ-ಲೀಗ್ ತನ್ನ ಪಾಲಿಗೆ ದೇವದೂತೆಯಾಗಿದ್ದಾಳೆ ಎಂದು ಆತ ಹೇಳಿಕೊಂಡಿದ್ದಾನೆ. ಕ್ರಾಸ್‌ಗೆ ಸಿಸೇರಿಯನ್ ಮೂಲಕ ಹೆರಿಗೆಯನ್ನು ಮಾಡಲಾಗಿತ್ತು.

ಕ್ರಾಸ್ ಕಳೆದ ಮೂರು ವರ್ಷಗಳಿಂದ ಶಾಸನಬದ್ಧವಾಗಿ ಪುರುಷನಾಗಿದ್ದ ಮತ್ತು ಮಹಿಳೆಯಿಂದ ಪುರುಷನಾಗಿ ಬದಲಾಗಲು ಹಾರ್ಮೋನ್ ಚಿಕಿತ್ಸೆಯನ್ನು ಅರ್ಧದಷ್ಟು ಪೂರೈಸಿದ್ದ.

ತಾನು ಬಯಸಿದಂತೆ ದೈಹಿಕವಾಗಿ ಪರಿಪೂರ್ಣ ಪುರುಷ ಅಂದರೆ ಓರ್ವ ತಂದೆಯಾಗುತ್ತೇನೋ ಇಲ್ಲವೋ ಎಂಬ ಆತಂಕ 21 ವರ್ಷಗಳ ಹಿಂದೆ ಹೆಣ್ಣಾಗಿ ಹುಟ್ಟಿ ಪೇಜ್ ಹೆಸರಿನಲ್ಲಿ ಬೆಳೆದಿದ್ದ ಕ್ರಾಸ್‌ನನ್ನು ಕಾಡುತ್ತಿತ್ತು. ಹೀಗಾಗಿ ಪುರುಷನಾಗಿ ಸಂಪೂರ್ಣ ಬದಲಾವಣೆ ಹೊಂದುವ ಮುನ್ನ ತನ್ನ ಅಂಡಗಳನ್ನು ಸಂರಕ್ಷಿಸಿಟ್ಟರೆ ಭವಿಷ್ಯದಲ್ಲಿ ಮಗುವನ್ನು ಪಡೆಯಬಹುದೆಂದು ಆತ ಆಶಿಸಿದ್ದ. ಆದರೆ ಬ್ರಿಟನ್‌ನಲ್ಲಿ ಲಿಂಗ ಬದಲಾವಣೆ ಮಾಡಿಕೊಳ್ಳುವವರಿಗೆ ಆರ್ಥಿಕ ನೆರವು ಒದಗಿಸುವ, ಸರಕಾರದ ಅಧೀನದಲ್ಲಿರುವ ರಾಷ್ಟ್ರೀಯ ಆರೋಗ್ಯ ಸೇವೆ(ಎನ್‌ಎಚ್‌ಎಸ್)ಯು ಆತನ ಅಂಡಗಳನ್ನು ಶೀತಲೀಕರಣ ವ್ಯವಸ್ಥೆಯಲ್ಲಿ ಸಂರಕ್ಷಿಸಿಡಲು ತಗುಲುವ 4,000 ಪೌಂಡ್ ವೆಚ್ಚವನ್ನು ಭರಿಸಲು ನಿರಾಕರಿಸಿತ್ತು. ಹೀಗಾಗಿ ಈಗಲೇ ಮಗುವೊಂದನ್ನು ಪಡೆಯಲು ಆತ ತನ್ನ ಲಿಂಗ ಬದಲಾವಣೆ ಪ್ರಕ್ರಿಯೆಯನ್ನು ಅರ್ಧಕ್ಕೇ ತಡೆಹಿಡಿದಿದ್ದ.

ಸೂಪರ್‌ಮಾರ್ಕೆಟ್‌ವೊಂದರ ಮಾಜಿ ಉದ್ಯೋಗಿಯಾದ ಕ್ರಾಸ್ ಫೇಸ್‌ಬುಕ್ ಮೂಲಕ ವೀರ್ಯದಾನಿಯನ್ನು ಹುಡುಕಿಕೊಂಡಿದ್ದ ಮತ್ತು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಯಶಸ್ವಿಯಾಗಿ ಗರ್ಭ ಧರಿಸಿದ್ದ. ಜೂನ್ 16ರಂದು ಗ್ಲೌಸೆಸ್ಟರ್‌ಷೈರ್‌ನ ರಾಯಲ್ ಆಸ್ಪತ್ರೆಯಲ್ಲಿ ಮಗುವನ್ನು ಹೆತ್ತಿರುವ ಕ್ರಾಸ್ ಈಗ ತನ್ನ ಲಿಂಗ ಬದಲಾವಣೆ ಪ್ರಕ್ರಿಯೆಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವ ತರಾತುರಿಯಲ್ಲಿದ್ದಾನೆ.

ಫೇಸ್‌ಬುಕ್‌ನಲ್ಲಿ ವೀರ್ಯದಾನಿಗಳ ಗುಂಪೊಂದನ್ನು ಪತ್ತೆ ಹಚ್ಚಿದ್ದ ಕ್ರಾಸ್‌ಗೆ ವೀರ್ಯದಾನ ಮಾಡಲು ಸಿದ್ಧವಿದ್ದ ವ್ಯಕ್ತಿಯೋರ್ವ ದೊರಕಿದ್ದ. ‘ಈಗ ಆ ಗುಂಪು ಅಸ್ತಿತ್ವದಲ್ಲಿಲ್ಲ, ಹೀಗಾಗಿ ನಾನು ಯಾರಿಗೂ ಹಣ ಪಾವತಿಸಬೇಕಿಲ್ಲ ’ಎಂದು ಕ್ರಾಸ್ ಹೇಳಿದ. ಮಗುವಿಗೆ ಒಂದು ವರ್ಷವಾದ ಬಳಿಕ ಮತ್ತೆ ಉದ್ಯೋಗ ಹುಡುಕಲು ಆತ ಯೋಚಿಸಿದ್ದಾನೆ.

 ಬ್ರಿಟನ್‌ನಲ್ಲಿ ಲಿಂಗ ಬದಲಾವಣೆ ಚಿಕಿತ್ಸೆಗೆ ಪ್ರತಿ ವ್ಯಕ್ತಿಗೆ ತಗುಲುವ ವೆಚ್ಚದ ಪೈಕಿ 29,000 ಪೌಂಡ್‌ಗಳನ್ನು ಎನ್‌ಎಚ್‌ಎಸ್ ಭರಿಸುತ್ತದೆ.

2008ರಲ್ಲಿ ಅಮೆರಿಕದಲ್ಲಿ ಥಾಮಸ್ ಬೀಟಿ ಎಂಬಾತ ಮಗುವಿಗೆ ಜನ್ಮ ನೀಡಿದ ಮೊದಲ ಪುರುಷನಾಗಿದ್ದ. ಹೆಣ್ಣಾಗಿ ಹುಟ್ಟಿದ ಆತ ಭಾಗಶಃ ಲಿಂಗ ಬದಲಾವಣೆ ಮಾಡಿಸಿಕೊಂಡಿದ್ದು, ಗರ್ಭ ಧರಿಸಲು ಸಾಧ್ಯವಾಗುವಂತೆ ತನ್ನ ಗರ್ಭಕೋಶವನ್ನು ಉಳಿಸಿಕೊಂಡಿದ್ದ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X