ಉಚಿತ ಮದ್ರಸ ಪಠ್ಯಪುಸ್ತಕ ವಿತರಣೆ
ಉಳ್ಳಾಲ, ಜು.9: ಮಸ್ಜಿದುಲ್ ಜಾಮಿಯಾ ಅಲ್-ಮುನವ್ವರ್ ಮತ್ತು ಮಂಬವುಲ್ ಉಲೂಂ ಮದ್ರಸ ಮಂಚಿಲ ಇದರ ಜಂಟಿ ಅಶ್ರಯದಲ್ಲಿ ಮುನವ್ವರ್ ಮತ್ತು ಮಂಬವುಲ್ ಉಲೂಂ ಮದ್ರಸ ವಿದ್ಯಾರ್ಥಿಗಳಿಗೆ ಉಚಿತ ಮದ್ರಸ ಪಠ್ಯಪುಸ್ತಕ ವಿತರಣೆಯು ಮಸ್ಜಿದುಲ್ ಜಾಮಿಯಾ ಅಲ್-ಮುನವ್ವರ್ ಹಾಲ್‌ನಲ್ಲಿ ನಡೆಯಿತು.
ಉಳ್ಳಾಲ ಸೈಯದ್ ಮದನಿ ಅರಬಿಕ್ ಕಾಲೇಜ್‌ನ ಪ್ರಾಂಶುಪಾಲ ಅಹ್ಮದ್ ಬಾವ ಮುಸ್ಲಿಯಾರ್ ಪುಸ್ತಕ ವಿತರಿಸಿ ಶುಭ ಹಾರೈಸಿದರು. ಮಂಚಿಲ ಜುಮಾ ಮಸೀದಿ ಖತೀಬ್ ಹಸನ್ ಮುಬಾರಕ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧಾರ್ಮಿಕ ವಿದ್ಯೆ ಕಲಿಯುವ ವಿದ್ಯಾರ್ಥಿಗಳಿಗೆ ಉಚಿತ ಮದ್ರಸ ಪಠ್ಯಪುಸ್ತಕಗಳನ್ನು ನೀಡುವುದು ಶ್ಲಾಘನಾರ್ಹ ಎಂದರು.
ಮಂಚಿಲ ಜುಮಾ ಮಸೀದಿ ಅಧ್ಯಕ್ಷ ಹಾಜಿ ಇದ್ದಿನಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಉಳ್ಳಾಲ ಎಸ್‌ವೈಎಸ್ ಸೆಂಟರ್ ಅಧ್ಯಕ್ಷ ಸೈಯದ್ ಜಲಾಲುದ್ದೀನ್ ತಂಙಳ್, ಮಂಗಳೂರು ದಕ್ಷಿಣ ವಿಧಾನಸಭಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಇಲ್ಯಾಸ್ ಉಳ್ಳಾಲ, ಮಂಚಿಲ ಜುಮಾ ಮಸೀದಿಯ ಉಪಾಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್ ಬೆಂಗ್ರೆ, ಕೋಶಾಧಿಕಾರಿ ಹಾಜಿ ಅಬ್ದುಲ್ ರಝಾಕ್, ಹಾಜಿ ಬದ್ರುದ್ದೀನ್ ಯು.ಡಿ., ಹಾಜಿ ಪುತ್ತುಬಾವಾ, ಸದರ್ ಮುಅಲ್ಲಿಂ ಅಬ್ದುಲ್ ರಹ್ಮಾನ್ ಮದನಿ, ಮಂಚಿಲ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.







