ಜಿರಂಜೀವಿ ಮೇಲೆ ಹಲ್ಲೆ: ಡಿವೈಎಫ್‌ಐ ನಿಯೋಗ ಭೇಟಿ
ಮಂಗಳೂರು, ಜು. 9: ಕುತ್ತಾರ್ ಸಮೀಪದ ರಾಣಿಪುರ ಎಂಬಲ್ಲಿ ಶನಿವಾರ ರಾತ್ರಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಗಾಯಗೊಂಡು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿರಂಜೀವಿಯ ಅವರನ್ನು ಡಿವೈಎಫ್‌ಐ ನಿಯೋಗ ರವಿವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿತು,
ಈ ಸಂದರ್ಭ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕುತ್ತಾರು ಪ್ರದೇಶದಲ್ಲಿ ಇಂತಹ 2 ಪ್ರಕರಣ ಈ ಹಿಂದೆಯೂ ನಡೆದಿದೆ. ಆದರೆ ಪೊಲೀಸ್ ಇಲಾಖೆ ದುಷ್ಕರ್ಮಿಗಳನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದೆ. ನಿನ್ನೆ ಕೂಡ ಅದೇ ರೀತಿಯಲ್ಲಿ ಹಲ್ಲೆ ನಡೆದಿದ್ದು, ಇದರಿಂದ ಜನರು ಸಂಜೆ ಹೊತ್ತಿನಲ್ಲಿ ನಡೆದಾಡಿಕೊಂಡು ಹೋಗಲು ಭಯಪಡುವಂತಾಗಿದೆ.
ಜಿಲ್ಲೆಯಲ್ಲಿ ಅನೇಕ ದಿನಗಳಿಂದ ನಡೆಯುತ್ತಿರುವ ಗಲಭೆಗಳು ಜನರಲ್ಲಿ ಭಯವನ್ನು ಹುಟ್ಟು ಹಾಕಿದೆ. ಇದನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕಿದೆ ಎಂದರು. ಡಿವೈಎಫ್‌ಐ ಉಳ್ಳಾಲ ವಲಯ ಕಾರ್ಯದರ್ಶಿ ಜೀವನ್ ರಾಜ್ ಕುತ್ತಾರ್, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಮುಖಂಡರಾದ ಸುನೀಲ್ ತೇವುಲ, ಭರತ್ ನಿಯೋಗದಲ್ಲಿದ್ದರು.





