ಮದ್ಯದ ಅಮಲಿನಲ್ಲಿ ಪೇದೆ ಮೇಲೆ ಹಲ್ಲೆ ಆರೋಪ: ಮೂವರ ಬಂಧನ
ಬೆಂಗಳೂರು, ಜು.9: ಮದ್ಯದ ಅಮಲಿನಲ್ಲಿ ಸಂಚಾರಿ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ಸಂಬಂಧ ಮೂವರನ್ನು ಇಲ್ಲಿನ ಕೆಆರ್‌ಪುರಂ ಸಂಚಾರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೆಆರ್‌ಪುರಂನ ಅದಿಲ್, ನದೀಮ್ ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಗರದ ಭಟ್ಟರಹಳ್ಳಿ ಬಳಿ ಶನಿವಾರ ರಾತ್ರಿ ರಸ್ತೆ ಬದಿ ಮೂವರು ಆರೋಪಿಗಳು ಬೈಕ್ ನಿಲ್ಲಿಸಿದ್ದರು.ಈ ಬಗ್ಗೆ ಪ್ರಶ್ನೆ ಮಾಡಲು ಹೋದ, ಕೆಆರ್ ಪುರಂ ಸಂಚಾರಿ ಠಾಣಾ ಪೊಲೀಸ್ ಪೇದೆ ಶಿವಾನಂದ ರಾಥೋಡ್ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಕೆಆರ್‌ಪುರಂ ಸಂಚಾರಿ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
Next Story





