ತರಬೇತಿ ಶಿಬಿರಕ್ಕೆ ಆಹ್ವಾನ
ಬೆಂಗಳೂರು, ಜು. 9: ವಿವಿಧ ಪದವಿಗಳಿಗೆ ಪ್ರವೇಶ ಪಡೆದು, ಪತ್ರಿಕೋದ್ಯಮದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗಾಗಿ ಉದಯಭಾನು ಕಲಾಸಂಘ ಹಾಗೂ ಮಾಧ್ಯಮ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಜು.22 ಮತ್ತು 23 ರಂದು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಪತ್ರಿಕೆ, ಟಿವಿ, ಆಕಾಶವಾಣಿ, ಸಾರ್ವಜನಿಕ ಸಂಪರ್ಕ ಸೇರಿದಂತೆ ಸಮೂಹ ಮಾಧ್ಯಮದ ಎಲ್ಲ ವಿಭಾಗಗಳ ವಿವಿಧ ಆಯಾಮಗಳನ್ನು ಯುವ ಜನಾಂಗಕ್ಕೆ ಪರಿಚಯ ಮಾಡಿಕೊಡುವ ಸಲುವಾಗಿ ಎರಡು ದಿನಗಳ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ 10 ಕ್ಕೂ ಅಧಿಕ ಪತ್ರಕರ್ತರು, ಟಿವಿ ಮಾಧ್ಯಮದವರು ಮಾರ್ಗದರ್ಶನ ನೀಡಲಿದ್ದಾರೆ.
ಶಿಬಿರದಲ್ಲಿ ಭಾಗವಹಿಸುವವರು ಉದಯಭಾನು ಕಲಾಸಂಘ, ಗವಿಪುರದ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ, ಕೆಂಪೇಗೌಡ ನಗರ, ಬೆಂಗಳೂರು-560 019 ಇಲ್ಲಿಗೆ ಅಥವಾ ದೂರವಾಣಿ ಸಂಖ್ಯೆ-080-2660 9343 ಸಂಖ್ಯೆ ಸಂಪರ್ಕಿಸಬಹುದು.
Next Story





