ಮರಳು ದಿಬ್ಬ ಕುಸಿದು ಇಬ್ಬರು ಮೃತ್ಯು, ಓರ್ವನಿಗೆ ಗಾಯ
ತುಮಕೂರು, ಜು. 9: ಮರಳು ದಿಬ್ಬ ಕುಸಿದ ಪರಿಣಾಮ ತಂದೆ, ಮಗ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಬಗ್ಗೆ ವರದಿಯಾಗಿದೆ.
ತುಮಕೂರು ತಾಲೂಕು ನಿವಾಸಿ ಉಮೇಶ್ (40) ಮತ್ತು ಅವರ ಪುತ್ರ ನಾಗವಲ್ಲಿಯ (15) ಮೃತರು ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಇನ್ನೋರ್ವ ವ್ಯಕ್ತಿಯನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆರೆಯಲ್ಲಿ ಮರಳು ತೆಗೆಯುವಾಗ ಈ ದುರ್ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ದೊರಕಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ. ಹೆಬ್ಬೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.
Next Story





