ಪಾಜಕ ಆನಂದತೀರ್ಥ ವಿದ್ಯಾಲಯಕ್ಕೆ 10ಲಕ್ಷ ದೇಣಿಗೆ

ಉಡುಪಿ, ಜು.9: ದುಬೈ ಬ್ರಾಹ್ಮಣ ಸಂಘದ ದಶಮಾನೋತ್ಸವದ ಪ್ರಯುಕ್ತ ಪೇಜಾವರ ಮಠದ ವತಿಯಿಂದ ಪಾಜಕದಲ್ಲಿ ನಡೆಯುತ್ತಿರುವ ಆನಂದತೀರ್ಥ ವಿದ್ಯಾಲಯದ ಒಂದು ಕೊಠಡಿಯ ವೆಚ್ಚ 10 ಲಕ್ಷ ರೂ. ದೇಣಿಗೆಯನ್ನು ಪರ್ಯಾಯ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹಾಗೂ ನೀಲಾವರ ಗೋಶಾಲೆಗೆ ದೇಣಿಗೆಯನ್ನು ಪೇಜಾವರ ಕಿರಿಯ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗೆ ಇತ್ತೀಚೆಗೆ ರಾಜಾಂಗಣದಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಮಹಾಪೋಷಕ ಪುತ್ತಿಗೆ ವಾಸುದೇವ ಭಟ್, ಅಧ್ಯಕ್ಷ ಸುಧಾಕರ್ ರಾವ್ ಪೇಜಾವರ, ಸಂಚಾಲಕ ಸಮಿತಿಯ ಕೃಷ್ಣರಾಜ ತಂತ್ರಿ, ಮತ್ತಿ ಮನೋಹರ್ ರಾವ್, ದಯಾನಂದ ಹೆಬ್ಬಾರ್ ಉಪಸ್ಥಿತರಿದ್ದರು.
Next Story





