ಗ್ರೇನೆಡ್ ದಾಳಿ: ಯೋಧನಿಗೆ ಗಾಯ

ಶ್ರೀನಗರ, ಜು. 9: ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಭದ್ರತಾ ಪಡೆಯ ಕ್ಯಾಂಪ್ ಮೇಲೆ ಉಗ್ರರು ಗ್ರೇನೆಡ್ ದಾಳಿ ನಡೆಸಿದ ಪರಿಣಾಮ ಕೇಂದ್ರ ಮೀಸಲು ಪಡೆ ಯೋಧನೊಬ್ಬ ಗಾಯಗೊಂಡಿದ್ದಾರೆ.
ಶನಿವಾರ ರಾತ್ರಿ 10.30ರ ಹೊತ್ತಿಗೆ ಟ್ರಾಲ್ ಪಟ್ಟಣದಲ್ಲಿದ್ದ ಕೇಂದ್ರ ಮೀಸಲು ಪಡೆ ಹಾಗೂ ಪೊಲೀಸ್ ಕ್ಯಾಂಪ್‌ನ ಮೇಲೆ ಉಗ್ರರು ಗ್ರೇನೆಡ್ ದಾಳಿ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರೇನೆಡ್ ಸ್ಫೋಟಗೊಂಡ ಪರಿಣಾಮ ಓರ್ವ ಯೋಧ ಗಾಯಗೊಂಡಿದ್ದಾನೆ. ಅವರನ್ನು ಶ್ರೀನಗರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





