ವಿಯೆಟ್ನಾಂ: 3 ಟನ್ ಆನೆದಂತ ವಶಕ್ಕೆ

ಹನೊಯಿ,ಜು.9: ಹಣ್ಣು ಹಂಪಲುಗಳ ಪೆಟ್ಟಿಗೆಗಳಲ್ಲಿ ಬಚ್ಚಿಡಲಾದ ಮೂರು ಟನ್‌ಗಳಷ್ಟು ಆನೆದಂತಗಳ ಆಕ್ರಮ ದಾಸ್ತಾನನ್ನು ವಿಯೆಟ್ನಾಂ ಅಧಿಕಾರಿಗಳು ಶನಿವಾರ ವಶಪಡಿಸಿಕೊಂಡಿದ್ದಾರೆ.
ವಿಯೆಟ್ನಾಂನಲ್ಲಿ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಆನೆದಂತ ದೊರೆತಿರುವುದು ಆ ದೇಶದಲ್ಲಿ ವನ್ಯಜೀವಿಗಳ ಕಳ್ಳಸಾಗಣೆ ವ್ಯಾಪಾರವು ಬಲವಾಗಿ ಬೇರುಬಿಟ್ಟಿರುವುದರ ಸೂಚನೆಯಾಗಿದೆಯೆಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.
ಮಧ್ಯ ವಿಯೆಟ್ನಾಂನ ಪ್ರಾಂತವಾದ ಥಾನ್ ಹೊವಾದಲ್ಲಿ ಟ್ರಕ್ಕೊಂದರ ಹಿಂಭಾಗದಲ್ಲಿಡಲಾದ ಪೆಟ್ಟಿಗೆಗಳಲ್ಲಿ 2.7 ಟನ್‌ಗಳಷ್ಟು ಆನೆದಂತಗಳನ್ನು ಬಚ್ಚಿಡಲಾಗಿರುವುದು ಪತ್ತೆಯಾಗಿದೆ. ಈ ಟ್ರಕ್ ಹಾನೊಯಿ ಕಡೆಗೆ ತೆರಳುತ್ತಿತ್ತೆಂದು ವರದಿ ತಿಳಿಸಿದೆ. ಈ ಆನೆದಂತಗಳು ದಕ್ಷಿಣ ಆಫ್ರಿಕದ ಮೂಲಕ ಕಳ್ಳಸಾಗಣೆಯಾಗಿರುವುದಾಗಿ ಸರಕಾರಿ ಮಾಧ್ಯಮಗಳು ವರದಿ ಮಾಡಿವೆ.
ವಿಯೆಟ್ನಾಂ 1992ರಲ್ಲಿ ಆನೆದಂತ ವ್ಯಾಪಾರವನ್ನು ನಿಷೇಧಿಸಿದೆಯಾದರೂ, ಆ ದೇಶವು ಈಗಲೂ ದಂತದ ಕಲಾಕೃತಿಗಳ ಉತ್ಪಾದನೆಗೆ ಖ್ಯಾತವಾಗಿವೆ.
Next Story





