Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಮೊಸುಲ್ ಐಸಿಸ್ ಮುಕ್ತ

ಮೊಸುಲ್ ಐಸಿಸ್ ಮುಕ್ತ

ಎಂಟು ತಿಂಗಳುಗಳ ರಕ್ತಸಿಕ್ತ ಸಮರ ಅಂತ್ಯ; ವಿಜಯಪತಾಕೆ ಹಾರಿಸಿದ ಇರಾಕಿ ಪಡೆ; ನಗರಕ್ಕೆ ಇರಾಕಿ ಪ್ರಧಾನಿ ಹೈದರ್ ಅಬಾದಿ ಭೇಟಿ

ವಾರ್ತಾಭಾರತಿವಾರ್ತಾಭಾರತಿ9 July 2017 11:09 PM IST
share
ಮೊಸುಲ್ ಐಸಿಸ್ ಮುಕ್ತ

ಮೊಸುಲ್,ಜು.10: ಐಸಿಸ್ ವಿರುದ್ಧ ಸುಮಾರು ಎಂಟು ತಿಂಗಳುಗಳ ಭೀಕರ ಸಮರದ ಬಳಿಕ ಕೊನೆಗೂ ಇರಾಕ್‌ನ ಪ್ರಮುಖ ನಗರ ಮೊಸುಲ್, ಇರಾಕಿ ಪಡೆಗಳ ವಶವಾಗಿದೆ. ಇದರೊಂದಿಗೆ ಆಯಕಟ್ಟಿನ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ ಈ ನಗರದಲ್ಲಿ ಮೂರು ವರ್ಷಗಳ ಐಸಿಸ್ ಆಳ್ವಿಕೆ ಅಂತ್ಯಗೊಂಡಿದೆ.

    ಆದಾಗ್ಯೂ ಸರಕಾರಿ ಪಡೆಗಳು ಹಾಗೂ ಐಸಿಸ್ ಉಗ್ರರ ನಡುವಿನ ಭೀಕರ ಕಾಳಗದಿಂದಾಗಿ ಈ ನಗರವು ಬಹುತೇಕ ಭಾಗಗಳು ಸಂಪೂರ್ಣವಾಗಿ ಜರ್ಝರಿತವಾಗಿದ್ದು, ಎಲ್ಲೆಡೆ ಕುಸಿದುಬಿದ್ದ ಕಟ್ಟಡಗಳ ಅವಶೇಷಗಳು ಕಂಡು ಬರುತ್ತಿವೆ. ಇಡೀ ನಗರ ಪಾಳುಬಿದ್ದ ಸ್ಥಿತಿಯಲ್ಲಿದೆ. ಮೊಸುಲ್ ನಗರದಲ್ಲಿ ಕಳೆದ ಎಂಟು ತಿಂಗಳುಗಳಿಂದ ನಡೆದ ರಕ್ತಸಿಕ್ತ ಕಾಳಗದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರಾರು ನಾಗರಿಕರು ಹತರಾಗಿದ್ದಾರೆ ಹಾಗೂ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ.

 ಮೊಸುಲ್ ನಗರವನ್ನು ಇರಾಕಿ ಪಡೆಗಳು ಇಂದು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ಬೆನ್ನಲ್ಲೇ, ಇರಾಕಿ ಪ್ರಧಾನಿ ಹೈದರ್ ಅಬಾದಿ ಅಲ್ಲಿಗೆ ಭೇಟಿ ನೀಡಿ ಸೇನಾ ಮುಖ್ಯಸ್ಥರನ್ನು ಭೇಟಿ ನೀಡಿದರು. ಮೊಸುಲ್‌ನಲ್ಲಿ ಸಾಧಿಸಿದ ವಿಜಯಕ್ಕಾಗಿ ಅವರು ವೀರ ಸೈನಿಕರನ್ನು ಹಾಗೂ ಇರಾಕಿ ನಾಗರಿಕರನ್ನು ಅಭಿನಂದಿಸಿದರು ಎಂದು ಅವರು ಕಾರ್ಯಾಲಯದ ಹೇಳಿಕೆ ತಿಳಿಸಿದೆ.

ಐಸಿಸ್ ಉಗ್ರರ ವಶದಿಂದ ವಿಮೋಚನೆಗೊಂಡ ಮೊಸುಲ್‌ನಗರವನ್ನು ಸಂದರ್ಶಿಸಿದ ವರದಿಗಾರರಿಗೆ ಅಲ್ಲಿನ ಹಳೆಯ ನಗರದ ಕಿರಿದಾದ ಓಣಿಗಳಲ್ಲಿ ಬಿದ್ದಿದ ಉಗ್ರರ ಹೆಣಗಳು ಸಾಲುಸಾಲಾಗಿ ಬಿದ್ದಿರುವುದು ಕಂಡುಬಂದಿತು. ಈ ಪ್ರದೇಶವು ಐಸಿಸ್ ಉಗ್ರರು ಹಾಗೂ ಇರಾಕಿ ಪಡೆಗಳ ನಡುವಿನ ಸುದೀರ್ಘ ಕಾಲದ ಹೋರಾಟಕ್ಕೆ ಸಾಕ್ಷಿಯಾಗಿತ್ತು.

   ಮೊಸುಲ್‌ನಲ್ಲಿ ಕೊನೆ ಉಸಿರಿನ ತನಕವೂ ಹೋರಾಡುವುದಾಗಿ ಐಸಿಸ್ ಗುಂಪು ಹೇಳಿಕೊಳ್ಳುತ್ತಲೇ ಬಂದಿತ್ತು. ಆದಾಗ್ಯೂ ನಗರದ ನಡುವೆ ಹಾದುಹೋಗುವ ಟೈಗ್ರಿಸ್ ನದಿಯಲ್ಲಿ ಈಜಿ ಪರಾರಿಯಾಗಲು ಯತ್ನಿಸುತ್ತಿದ್ದ 20 ಮಂದಿ ಭಯೋತ್ಪಾದಕರನ್ನು ಕೊಂದುಹಾಕಿರುವುದಾಗಿ ಇರಾಕಿ ಸೇನಾ ವಕ್ತಾರ ಜನರಲ್ ಯಾಹ್ಯಾ ರಸೂಲ್, ಇಂದು ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದೀಗ ಮೊಸುಲ್‌ನ ಹೊರವಲಯದಲ್ಲಿ ಚದುರಿ ಹೋಗಿರುವ ಉಗ್ರರು, ನಗರಕ್ಕೆ ವಾಪಾಸಾಗುತ್ತಿರುವ ಸಹಸ್ರಾರು ನಾಗರಿಕರೊಂದಿಗೆ ತಮ್ಮ ಮಹಿಳಾ ಬಾಂಬರ್‌ಗಳನ್ನು ಕಳುಹಿಸಿ, ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ಹೂಡಿದ್ದಾರೆಂದು ವರದಿಗಳು ತಿಳಿಸಿವೆ.

    ಈ ಸುದೀರ್ಘ ಯುದ್ಧದಲ್ಲಿ ಇರಾಕಿ ಸೇನೆಯೂ ಭಾರೀ ಬೆಲೆಯನ್ನು ತೆರಬೇಕಾಗಿ ಬಂದಿದ್ದು, ಅದರ ನೂರಾರು ಯೋಧರು ಸಾವನ್ನಪ್ಪಿದ್ದಾರೆ. ಮೊಸೂಲ್‌ನಲ್ಲಿ ಇರಾಕ್ ಸೇನೆಯು ಐಸಿಸ್ ವಿರುದ್ಧದ ಕಾರ್ಯಾಚರಣೆಗೆ ಬೆಂಬಲವಾಗಿ ಅಮೆರಿಕವು ಅಲ್ಲಿದ್ದ ಉಗ್ರರ ನೆಲೆಗಳ ಮೇಲೆ ವೈಮಾನಿಕ ಬಾಂಬ್ ದಾಳಿ ನಡೆಸಿತ್ತು ಹಾಗೂ ಇರಾಕಿ ಸೇನೆಯ ಕಾರ್ಯಾಚರಣೆಗಳಲ್ಲೂ ಲ್ಲೂ ನೆರವಾಗಿದ್ದವು.

ಭದ್ರಕೋಟೆ ಕಳೆದುಕೊಂಡ ಐಸಿಸ್

 *ತನ್ನ ನಿಯಂತ್ರಣದಲ್ಲಿದ್ದ ಅತಿ ದೊಡ್ಡ ನಗರವಾದ ಮೊಸುಲ್‌ನ್ನು ಕಳೆದುಕೊಂಡ ಬಳಿಕ ಇರಾಕ್‌ನಲ್ಲಿ ಐಸಿಸ್ ಆಧಿಪತ್ಯ ಈಗ ಮೊಸುಲ್ ನಗರದ ಹೊರವಲಯದಲ್ಲಿರುವ ದಕ್ಷಿಣ ಹಾಗೂ ಪಶ್ಚಿಮ ಭಾಗಗಳಲ್ಲಿನ ಗ್ರಾಮೀಣ ಹಾಗೂ ಮರುಭೂಮಿ ಪ್ರದೇಶಗಳಿಗಷ್ಟೇ ಸೀಮಿತವಾಗಿವೆ.

*ಮಧ್ಯಯುಗದ ಗ್ರಾಂಡ್ ಅಲ್ ನೂರಿ ಮಸೀದಿಯಿಂದಐಸಿಸ್ ನಾಯಕ ಅಬುಬಕರ್ ಅಲ್ ಬಗ್ದಾದಿ ಖಲೀಫೇಟ್ ರಾಜ್ಯವನ್ನು ಘೋಷಿಸಿ, ಹೆಚ್ಚುಕಮ್ಮಿ ಮೂರು ವರ್ಷಗಳು ತುಂಬಿದಾಗಲೇ ಮೊಸುಲ್ ಇರಾಕಿ ಪಡೆಗಳ ವಶವಾಗಿದೆ

*ಇರಾಕಿ ಪಡೆಗಳು ಅಲ್ ನೂರಿ ಮಸೀದಿಯನ್ನು ಕಳೆದ ವಾರ ವಶಪಡಿಸಿಕೊಂಡ ಬಳಿಕ ಇರಾಕಿ ಪ್ರಧಾನಿ ಅಬಾದಿ ಅವರು ಐಸಿಸ್‌ನ ಸುಳ್ಳು ಸಾಮ್ರಾಜ್ಯದ ಅಂತ್ಯ ಸಮೀಪಿಸಿದೆ ಎಂದು ಘೋಷಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X