ಚಾಪಲ್ಲ: ಪದಾಧಿಕಾರಿಗಳ ಆಯ್ಕೆ
ಮಂಗಳೂರು, ಜು. 10: ಬದ್ರಿಯಾ ಜುಮಾ ಮಸೀದಿ ಚಾಪಲ್ಲ ಸವಣೂರು ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸೈಯದ್ ಹಾದಿ ತಂಙಳ್ ಮೆಮೋರಿಯಲ್ ದರ್ಸ್ ಹಾಗೂ ಮಕಾಷಿಫುಲ್ ಖುಲೂಬ್ ದರ್ಸ್ ಸ್ಟೂಡೆಂಟ್ ಅಶೋಸಿಯೇಶನ್ ಇದರ ವಾರ್ಷಿಕ ಮಹಾಸಭೆ ಚಾಪಲ್ಲ ಮಸೀದಿಯಲ್ಲಿ ಚಾಪಲ್ಲ ಮುದರ್ರಿಸ್ ಅಶ್ರಫ್ ಬಾಖವಿ ಉಸ್ತಾದರ ಅದ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ನೂತನ ಸಾಲಿನ ಪದಾದಿಕಾರಿಗಳನ್ನು ಆರಿಸಲಾಯಿತು.
ಗೌರವಾದ್ಯಕ್ಷರಾಗಿ ಉಸ್ತಾದ್ ಅಶ್ರಫ್ ಬಾಖವಿ ಮುರ, ಅಧ್ಯಕ್ಷರಾಗಿ ಮನ್ಸೂರ್ ಪದ್ಮುಂಜ, ಉಪಾಧ್ಯಕ್ಷರಾಗಿ ಇಸ್ಹಾಕ್ ಪಟ್ಟೆ, ಅಶ್ರಫ್ ಕರಾಯ, ಮುರ್ತಳಾ ಕರಾಯ, ಪ್ರಧಾನ ಕಾರ್ಯದರ್ಶಿಯಾಗಿ ಸ್ವಾಧಿಕ್ ಬಜೆಗುಂಡಿ, ಜೊತೆ ಕಾರ್ಯದರ್ಶಿಯಾಗಿ ಸಫ್ವಾನ್ ಮಾಪಾಲ್, ಇಕ್ಬಾಲ್ ಮೂಡಿಗೆರೆ, ಕೋಶಾಧಿಕಾರಿಯಾಗಿ ಖಲಂದರ್ ಶಾಫಿ ಕರಾಯ, ವರ್ಕಿಂಗ್ ಕಾರ್ಯದರ್ಶಿಯಾಗಿ ಮುನವ್ವರ್ ಕರಾಯ ಹಾಗೂ ಫಂಡ್ ಕಾರ್ಯದರ್ಶಿಯಾಗಿ ಮುಝಮ್ಮಿಲ್ ಮೂಡಿಗೆರೆ ಇವರನ್ನ ಆಯ್ಕೆ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.
ಸ್ವಾದಿಕ್ ಬಜೆಗುಂಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Next Story





