ರೋಟರಿಯಿಂದ ಉತ್ತಮ ನಾಯಕತ್ವ ಗುಣ: ಸೂರ್ಯಪ್ರಕಾಶ್ ಭಟ್

ಪಡುಬಿದ್ರಿ, ಜು10: ರೋಟರಿ ಕ್ಲಬ್‌ನ ಚುಕ್ಕಾಣಿ ಹಿಡಿದವರು ಉತ್ತಮ ನಾಯಕತ್ವ ಗುಣ ಹೊಂದಿರುತ್ತಾರೆ ಎಂದು ಅಂತರಾಷ್ಟ್ರೀಯ ರೋಟರಿ ನಿರ್ದೇಶಕ ಸೂರ್ಯಪ್ರಕಾಶ್ ಭಟ್ ಹೇಳಿದ್ದಾರೆ.
ಅವರು ಭಾನುವಾರ ಪಡುಬಿದ್ರಿಯ ಸಾಯಿ ಆರ್ಕೆಡ್‌ನಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ನೂತನ ಅಧ್ಯಕ್ಷ ರಮೀಝ್ ಹುಸೈನ್ ಮತ್ತು ತಂಡದ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ಅಧಿಕಾರಿಯಾಗಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.
ರೋಟರಿ ಸಮಾಜ ಸೇವಾ ಸಂಸ್ಥೆಗಳೊಂದಿಗೆ ಮಾನವೀಯ ಸಂಬಂಧವನ್ನು ಬೆಳೆಸಿಕೊಂಡಿದೆ. ಈ ಮೂಲಕ ಜಗತ್ತಿನಲ್ಲಿ ನಾವು ಹೃದಯವಂತಿಕೆಯವರಾದ್ದೇವೆ ಎಂದ ಅವರು, ರೋಟರಿಯಲ್ಲಿ ಯಾವತ್ತೂ ರಾಜಕೀಯ ತಾರದೆ ರೋಟರಿ ಸದಸ್ಯರಾದವರು ರಾಜಕೀಯಕ್ಕೆ ಪ್ರವೇಶ ಮಾಡಿದಲ್ಲಿ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದರು.
ಸಹಾಯಕ ಗವರ್ನರ್ ಹರಿಪ್ರಕಾಶ್ ಶೆಟ್ಟಿ ಸ್ಪಂಧನ ಗೃಹಪತ್ರಿಕೆ ಬಿಡುಗಡೆಗೊಳಿಸಿದರು. ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮಾಸಿಕವಾಗಿ ಆರು ಮಂದಿ ಬಡಕುಟುಂಬಕ್ಕೆ ಆಹಾರ ಸಾಮಾಗ್ರಿಗಳನ್ನು ಒದಗಿಸುವ ವ್ಯವಸ್ಥೆಗೆ ಚಾಲನೆ ನೀಡಲಾಯಿತು. ವಲಯ ಸೇನಾನಿ ಪಿ.ಕೃಷ್ಣ ಬಂಗೇರಾ, ಚಲನಚಿತ್ರ ನಟಿ ರಂಜಿತಾ, ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ಹಮೀದ್, ಕಾರ್ಯದರ್ಶಿ ಕರುಣಾಕರ ನಾಯಕ್, ನೂತನ ಕಾರ್ಯದರ್ಶಿ ಸಂದೀಪ್ ಫಲಿಮಾರ್ ಉಪಸ್ಥಿತರಿದ್ದರು.







