ಟಿಪ್ಪರ್ ಢಿಕ್ಕಿ:ಬೈಕ್ ಸವಾರ ಮೃತ್ಯು
ಮಂಡ್ಯ, ಜು.10: ಟಿಪ್ಪರ್ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೃಷ್ಣರಾಜಪೇಟೆ ತಾಲೂಕಿನ ಮಾಚಹೊಳಲು ಗ್ರಾಮದ ಬಳಿ ಬೇರ್ಯ ಮುಖ್ಯ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಮಾಚಹೊಳಲು ಗ್ರಾಮದ ದಿ.ಸಾಕೇಗೌಡರ ಮಗ ದಶರಥ (48) ಸಾವನ್ನಪ್ಪಿದ ಬೈಕ್ ಸವಾರ. ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





