ವಕೀಲ ವಿನೋದ್ ವಿರುದ್ಧ ಈಶ್ವರಪ್ಪ ಮಾನನಷ್ಟ ಮೊಕದ್ದಮೆ ದಾಖಲು
.jpg)
ಬೆಂಗಳೂರು, ಜು.10: ಆಧಾರ ರಹಿತ ಆರೋಪ ಮಾಡಿರುವ ಶಿವಮೊಗ್ಗ ಮೂಲದ ವಿನೋದ್ ಎಂಬುವವರ ವಿರುದ್ಧ ವಿಧಾನ ಪರಿಷತ್‌ನ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.
ತಮ್ಮ ವಕೀಲರ ಜೊತೆ ಖುದ್ದಾಗಿ ಕೋರ್ಟ್‌ಗೆ ಆಗಮಿಸಿದ್ದ ಕೆ.ಎಸ್.ಈಶ್ವರಪ್ಪ ಅವರು 5 ಕೋಟಿ ರೂ.ಮಾನನಷ್ಟ ಪರಿಹಾರಕ್ಕಾಗಿ ಕೋರ್ಟ್‌ನಲ್ಲಿ ಮಾನನಷ್ಟ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.
ಕೋರ್ಟ್‌ನಿಂದ ಹೊರ ಬಂದು ಮಾತನಾಡಿದ ಈಶ್ವರಪ್ಪ ಅವರು, ವಕೀಲ ವಿನೋದ ತಮಗೆ ಪದೇ ಪದೇ ಬ್ಲಾಕ್ ಮೇಲ್ ಮಾಡುತ್ತಿದ್ದು, ಅನಗತ್ಯವಾಗಿ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಹೀಗಾಗಿ, ಸೋಮವಾರ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದೆು ದಾಖಲಿಸಿದ್ದೇನೆ ಎಂದು ಹೇಳಿದರು.
ನ್ಯಾಯಾಲಯ ಶುಲ್ಕವಾಗಿ 4.57 ಲಕ್ಷ ಹಣ ಪಾವತಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇನೆ ಎಂದರು.
Next Story





