ಗ್ಯಾಚ್ಯುವಿಟಿಗೆ 20 ಲಕ್ಷದವರೆಗೆ ತೆರಿಗೆ ವಿನಾಯಿತಿ ಸಾಧ್ಯತೆ: ಸಂಸತ್ತಿನಲ್ಲಿ ಮಸೂದೆ ಮಂಡನೆಗೆ ನಿರ್ಧಾರ

ಹೊಸದಿಲ್ಲಿ, ಜು.10: ಗ್ಯಾಚ್ಯುವಿಟಿಗೆ ವಿನಾಯಿತಿಯನ್ನು 10 ರೂ.ನಿಂದ 20 ಲಕ್ಷ ರೂ.ಗೆ ಏರಿಸುವ ಮಸೂದೆಯನ್ನು ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಅಂಗೀಕರಿಸಲಾಗುವುದು ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ತಿಳಿಸಿದ್ದಾರೆ.ಈ ಗ್ರಾಚ್ಯುವಿಟಿ ಮಸೂದೆ ತಿದ್ದುಪಡಿಯನ್ನು ಮೊದಲು ಸಂಪುಟ ಪರಿಶೀಲಿಸಿದೆ. ಶೀಘ್ರದಲ್ಲಿ ಈ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗುವುದು ಎಂದು ಅವರು ತಿಳಿಸಿದರು.
ಸಂಸತ್ತಿನಲ್ಲಿ ಈ ಮಸೂದೆ ಅಂಗೀಕಾರವಾದರೆ 20 ಲಕ್ಷ ರೂ. ವರೆಗೆ ಗ್ಯಾಚ್ಯುವಿಟಿ ಇರುವ ಸಂಘಟಿತ ವಲಯದ ಕಾರ್ಮಿಕರು ತೆರಿಗೆ ವಿನಾಯಿತಿ ಪಡೆಯಲಿದ್ದಾರೆ ಎಂದು ಅವರು ಹೇಳಿದ್ದಾರೆ.ಇದು ನಮ್ಮ ಕಾರ್ಯಸೂಚಿ. ಇದನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸ ಲಾಗುವುದು. ಅದು ಶೀಘ್ರದಲ್ಲಿ ಸಂಪುಟ ಅನುಮೋದನೆಗೆ ಬರಲಿದೆ ಎಂದು ದತ್ತಾತ್ರೇಯ ಹೇಳಿದ್ದಾರೆ.
Next Story





