ಅಕ್ರಮ ಮರಳು ಸಾಗಾಟ: ಟಿಪ್ಪರ್ ವಶಕ್ಕೆ
ಶಂಕರನಾರಾಯಣ, ಜು.10: ಕುಳ್ಳುಂಜೆ ಗ್ರಾಮದ ಕುಂಬಾರಮಕ್ಕಿ ವರಾಹಿ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್‌ನ್ನು ಸಿಂಗಿನ ಕೊಡ್ಲು ಕ್ರಾಸ್ ಎಂಬಲ್ಲಿ ಶಂಕರನಾರಾಯಣ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉಳ್ಳೂರು ಗ್ರಾಮದ ದಿನಕರ ನಾಯ್ಕ(26), ಕುಳ್ಳುಂಜೆ ಗ್ರಾಮದ ಮಹೇಶ ಮಡಿವಾಳ(26), ಶಂಕರನಾರಾಯಣದ ಜಯರಾಮ ನಾಯ್ಕ ಎಂಬವರು ನದಿಯಿಂದ ಕಳವು ಮಾಡಿದ ಮರಳನ್ನು ಅಕ್ರಮವಾಗಿ ಟಿಪ್ಪರ್ ಲಾರಿಯಲ್ಲಿ ಶಂಕರನಾರಾಯಣ ಕಡೆಗೆ ಸಾಗಾಟ ಮಾಡುತ್ತಿರುವಾಗ ಖಚಿತ ವರ್ತಮಾನ ದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಟಿಪ್ಪರ್‌ನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.
Next Story





