ಜು.17-23: ಸರಯೂ ಸಪ್ತಾಹ ಕಾರ್ಯಕ್ರಮ
ಮಂಗಳೂರು, ಜು.10: ನಗರದ ಕೋಡಿಕಲ್‌ನ ಸರಯೂ ಬಾಲ ಯಕ್ಷವೃಂದ ಮಕ್ಕಳ ಮೇಳವು ಜು.17ರಿಂದ 23ರವರೆಗೆ ‘ಸರಯೂ ಸಪ್ತಾಹ’ ಕಾರ್ಯಕ್ರಮವು ಶ್ರೀ ಕ್ಷೇತ್ರ ಕದ್ರಿ ದೇವಳದ ರಾಜಾಂಗಣದಲ್ಲಿ ಜರಗಲಿದೆ ಎಂದು ಸಂಸ್ಥೆಯ ನಿರ್ದೇಶಕ ಶಿಕ್ಷಕ ವರ್ಕಾಡಿ ರವಿ ಅಲೆವೂರಾಯ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುವರ್ಣ ಮಧು’ ಸಂಭ್ರಮ ಸರಣಿಯ ಸರಯೂ ಸಪ್ತಾಹದ ಉದ್ಘಾಟಕರಾಗಿ ಲೇಡಿಹಿಲ್‌ನ ಸಾಯಿಮಂದಿರದ ಮೋಕ್ತೇಸರ ವಿಶ್ವಾಸ್‌ಕುಮಾರ್ ದಾಸ್, ಅತಿಥಿಯಾಗಿ ಶ್ರೀಕ್ಷೇತ್ರ ಕದ್ರಿಯ ಸಿಇಒ ನಿಂಗಯ್ಯ ಭಾಗವಹಿಸಲಿದ್ದಾರೆ. ಜು.23ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಜು.17ರಿಂದ 23ರವರೆಗೆ ಶ್ರೀದೇವಿ ಮಹಾತ್ಮೆ-1, ಸತ್ವ ಪರೀಕ್ಷೆ, ದಕ್ಷಾಧ್ವರ, ಶ್ರೀದೇವಿ ಮಹಾತೆ-2, ಕೀಚಕ ವಧೆ, ಪದ್ಮಾವತಿ ಪರಿಣಯ ಮತ್ತಿತರ ಬಯಲಾಟಗಳು ಜರಗಲಿವೆ ಎಂದರು.
ಸಪ್ತಾಹದಲ್ಲಿ ಅಂಧ ಯಕ್ಷಗಾನ ಕಲಾವಿದ ಗುರುರಾಜ್‌ಗೆ ಸನ್ಮಾನಿಸಲಾಗುವುದು. ಸುಂದರ ಕೋಟ್ಯಾನ್ ಪೊರ್ಕೋಡಿ, ರಾಮಚಂದ್ರ ಸಾಲ್ಯಾನ್ ಮುಕ್ಕ, ಪುರುಷೋತ್ತಮ ಭಟ್ ನಿಡ್ವಜೆ, ರಣಜಿತಾ ಭಟ್ ಎಲ್ಲೂರು ಹಾಗೂ ಸಂದೀಪ್ ಶೆಟ್ಟಿ ದೋಟರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಗೌರವ ಸಂಚಾಲಕ ಹರಿಕೃಷ್ಣ ಪುನರೂರು, ವಿಜಯಲಕ್ಷ್ಮೀ ಎಲ್., ಮಟ್ಟಿ ಲಕ್ಷ್ಮೀನಾರಾಯಣ ರಾವ್ ಉಪಸ್ಥಿತರಿದ್ದರು.







