ಪಂಜಿಮೊಗರು: ಮದ್ಯದಂಗಡಿಗಳ ಸ್ಥಳಾಂತರ ವಿರೋಧಿಸಿ ಧರಣಿ

ಮಂಗಳೂರು, ಜು.10: ಕೂಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ನಾಲ್ಕು ಮದ್ಯದಂಗಡಿಗಳು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಮುಚ್ಚಲ್ಪಟ್ಟಿದ್ದು ಇವುಗಳು ಗುಡ್ಡೆಂಗಡಿ ಹಾಗೂ ಪಂಜಿಮೊಗರು ವ್ಯಾಪ್ತಿಗೆ ಸ್ಥಳಾಂತರಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲವೆಂದು ಸ್ಥಳೀಯ ಕಾರ್ಪೊರೇಟರ್ ದಯಾನಂದ ಶೆಟ್ಟಿ ಹೇಳಿದರು.
ಪಂಜಿಮೊಗರು ವ್ಯಾಪ್ತಿಗೆ ಮದ್ಯದಂಗಡಿಗಳ ಸ್ಥಳಾಂತರ ವಿರೋಧಿಸಿ ನಾಗರಿಕರು ನಡೆಸಿದ ಧರಣಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗುಡ್ಡೆಂಗಡಿ ನಾಗರಿಕ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್, ಪಂಜಿಮೊಗರು ಪ್ರದೇಶದ ವಿವಿಧ ಸಂಘಟನೆಗಳ ಮುಖಂಡರಾದ ಹಕೀಂ ಕೂಳೂರು, ಚರಣ್ ಶೆಟ್ಟಿ, ಖಲೀಲ್ ಮಾತನಾಡಿದರು.
ಮಾಜಿ ಕಾರ್ಪೊರೇಟರ್ ಬಿ.ಕೆ ಕೃಷ್ಣಪ್ಪ, ಸದಾಶಿವ ಸುವರ್ಣ, ಅನಿಲ್ ಡಿಸೋಜ, ನಝೀರ್, ಕುಸುಮಾ, ಬುನಿಯ, ತುಕರಾಮ್, ಸೌಮ್ಯಾ, ನೌಶಾದ್, ಕಸ್ತೂರಿ, ಸರಿತಾ, ನವೀನ್ ಡಿಸೋಜ, ಮುಸ್ತಫಾ, ಎಂ.ಬಿ. ಮುನೀರ್, ನೌಫಾಲ್ ಶಾಂತಿನಗರ, ಹಸೈನಾರ್, ರೊನಾಲ್ಡ್, ರಾಘವೇಂದ್ರ, ಹನುಮಂತ, ಪುನೀತ್ ಮತ್ತಿತರರು ಭಾಗವಹಿಸಿದ್ದರು. ಸಂತೋಷ್ ಡಿಸೋಜ ಸ್ವಾಗತಿಸಿದರು. ಬಶೀರ್ ವಂದಿಸಿದರು.





