ಅಫ್ಘಾನ್ ವಿದ್ಯಾರ್ಥಿನಿಯರ ರೊಬೊಟ್..!
ಅಫ್ಘಾನಿಸ್ತಾನದ ಹೇರತ್‌ನಲ್ಲಿರುವ ಖಾಸಗಿ ರೊಬೊಟ್ ತರಬೇತಿ ಸಂಸ್ಥೆ ‘ಬೆಟರ್ ಐಡಿಯಾ ಆರ್ಗನೈಸೇಶನ್ ಸೆಂಟರ್’ನಲ್ಲಿ ಅಫ್ಘಾನ್ ವಿದ್ಯಾರ್ಥಿನಿಯರು ತಾವು ನಿರ್ಮಿಸಿದ ರೊಬೊಟ್‌ಗಳನ್ನು ಪರಿಶೀಲಿಸುತ್ತಿರುವುದು. ಜುಲೈ 16ರಿಂದ 18ರವರೆಗೆ ಅಮೆರಿಕ ವಾಶಿಂಗ್ಟನ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ರೊಬೊಟಿಕ್ಸ್ ಸ್ಪರ್ಧೆಯಲ್ಲಿ ಅವರು ನಿರ್ಮಿಸಿರುವ ರೊಬೊಟ್‌ಗಳು ಪಾಲ್ಗೊಳ್ಳಲಿವೆ. ಆದರೆ ಅವರು ಅಮೆರಿಕಕ್ಕೆ ತೆರಳದೆ ವೀಡಿಯೊ ಮೂಲಕ ಸ್ಪರ್ಧೆ ವೀಕ್ಷಿಸಲಿದ್ದಾರೆ. ಅಫ್ಘಾನ್ ಪ್ರಜೆಗಳ ಅಮೆರಿಕ ಪ್ರವೇಶಕ್ಕೆ ಟ್ರಂಪ್ ಆಡಳಿತ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿನಿಯರಿಗೆ ಅಲ್ಲಿಗೆ ತೆರಳಲು ಸಾಧ್ಯವಾಗುತ್ತಿಲ್ಲ.
Next Story





