ಬೈಕಂಪಾಡಿ ಜಮಾತ್ ಕುಟಿಗೆ ಆಯ್ಕೆ

ಮಂಗಳೂರು, ಜು.10: ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ನೋಂದಾಯಿತ ಬೈಕಂಪಾಡಿ ಮುಹಿಯುದ್ದೀನ್ ಜುಮಾ ಮಸೀದಿ ಮುಸ್ಲಿಂ ಜಮಾಅತ್ ಸರ್ವ ಸದಸ್ಯರ ಮಹಾಸಭೆಯು ಇತ್ತೀಚೆಗೆ ನಡೆಯಿತು.
ಖತೀಬ್ ಹೈದರಾಲಿ ಮದನಿ ಸಭೆ ಉದ್ಘಾಟಿಸಿದರು. ವಕ್ಫ್ ನಿಯಮದಂತೆ ಮೂರು ವರ್ಷಗಳಿಗೊಮ್ಮೆ ಮಸೀದಿಯ ಆಡಳಿತ ಸಮಿತಿಯನ್ನು ಆಯ್ಕೆ ಮಾಡಬೇಕಾಗಿದ್ದು, ಮಹಾಸಭೆಯಲ್ಲಿ ಹೊಸ ಚುನಾವಣೆ ನಡೆದು, 11 ಸದಸ್ಯರನ್ನು ಆಯ್ಕೆ ಮಾಡಲಾಯಿತು.
2017-2020ರ ಸಾಲಿನ ಅಧ್ಯಕ್ಷರಾಗಿ ಬಿ. ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಚೈಬಾವಾ, ಪ್ರಧಾನ ಕಾರ್ಯದರ್ಶಿ ಯಾಗಿ ಸೈದುದ್ದೀನ್, ಜೊತೆ ಕಾರ್ಯದರ್ಶಿಯಾಗಿ ಶಮೀರ್ ಹಸನ್, ಕೋಶಾಧಿಕಾರಿಯಾಗಿ ಫಾರೂಕ್ ಶೇಡಿಗುರಿ ಆಯ್ಕೆಯಾದರು.
Next Story





