ಶಾಸಕರ ಅನುದಾನ ಬಿಡುಗಡೆ
ಮಂಗಳೂರು, ಜು.10: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಚಿವ ಯು.ಟಿ. ಖಾದರ್‌ರ 2016-17ನೆ ಸಾಲಿನ ಅನುದಾನದಲ್ಲಿ ಹರೇಕಳ ಗ್ರಾಪಂನ ಬಾವಲಿಗುರಿಯಿಂದ ಮಲಾರ್ ಸಂಪರ್ಕಿಸುವ ರಸ್ತೆ ರಚನೆ ಕಾಮಗಾರಿಗೆ 4.50 ಲಕ್ಷ ರೂ., ಕೊಣಾಜೆ ಗ್ರಾಪಂನ ಪುಲ್ಲು ಕಲಾಯಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ 5 ಲಕ್ಷ ರೂ., ಹರೇಕಳ ಗ್ರಾಪಂನ ಫರೀದ್ ನಗರದಿಂದ ಕಿಸಾನ್ ನಗರಕ್ಕೆ ಸಂಪರ್ಕ ರಸ್ತೆ ಮಣ್ಣು ಹಾಕಿ ರಸ್ತೆ ರಚನೆ ಕಾಮಗಾರಿಗೆ 3 ಲಕ್ಷ ರೂ.ಮಂಜೂರು ಮಾಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿಯ ಕಚೇರಿ ಪ್ರಕಟನೆ ತಿಳಿಸಿದೆ.
Next Story





