ಯಲ್ಲಾಪುರ: ಯುವತಿ ಮೇಲೆ ಹಲ್ಲೆ; ಪ್ರಕರಣ ದಾಖಲು
ಮುಂಡಗೋಡ, ಜು.11: ಯುವತಿಯೋರ್ವಳ ಮೇಲೆ ಇಬ್ಬರು ಮಹಿಳೆಯರು ಹಲ್ಲೆ ನಡೆಸಿದ ಘಟನೆ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಯುವತಿಯನ್ನು ಇಂದಿರಾ. ಪಿ. ಗೌಡ ಮರಹಳ್ಳಿ ಎಂದು ತಿಳಿದುಬದಿದೆ.
ಯಲ್ಲಾಪುರ ತಾಲೂಕಿನ ಬಂಕೊಳ್ಳಿಯಲ್ಲಿ ಗ್ರಾಮದ ಶಾಲೆಯೊಂದರಲ್ಲಿ ಶಿಕ್ಷಕರಿಗೆ ಸಂಬಂದಿಸಿದ ಸಭೆ ನಡೆಯುತ್ತಿದ್ದಾಗ ಹಲ್ಲೆಗೊಳಗಾದ ಯುವತಿ ಮಾತನಾಡುವ ಸಂದರ್ಭದಲ್ಲಿ ವೈಯಕ್ತಿಕ ದ್ವೇಷ ಹೊಂದಿದ ಇಬ್ಬರು ಮಹಿಳೆಯರು ಇಂದಿರಾಳ ಮೇಲೆ ಏಕಾಏಕಿ ದಾಳಿ ನಡೆಸಿ, ಒಬ್ಬಳು ಬೆನ್ನಿನ ಮೇಲೆ ಗುದ್ದಿ ಹೊರ ನಡೆ ಎಂದು ಹೇಳಿದ್ದಾಳೆ. ಇನ್ನೊಬ್ಬಳು ವಯರ್ ನಿಂದ ಹೊಡೆದಿದ್ದಾಳೆ. ಹಲ್ಲೆ ಮಾಡಿದವರನ್ನು ಹೆಮಾವತಿ ಹಾಗೂ ಬೇಬಿ ಎಂದು ಹಲ್ಲೆಗೊಳಗಾದ ಯುವತಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾಳೆ.
Next Story





