Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಅನಧಿಕೃತ ಮಸಾಜ್ ಕೇಂದ್ರ, ಸ್ಕಿಲ್...

ಅನಧಿಕೃತ ಮಸಾಜ್ ಕೇಂದ್ರ, ಸ್ಕಿಲ್ ಗೇಮ್‌ಗಳಿಗೆ ಮೇಯರ್ ದಾಳಿ

ವಾರ್ತಾಭಾರತಿವಾರ್ತಾಭಾರತಿ11 July 2017 7:21 PM IST
share
ಅನಧಿಕೃತ ಮಸಾಜ್ ಕೇಂದ್ರ, ಸ್ಕಿಲ್ ಗೇಮ್‌ಗಳಿಗೆ ಮೇಯರ್ ದಾಳಿ

ಮಂಗಳೂರು, ಜು. 11: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಅವರು ನಾಲ್ಕು ಅನಧಿಕೃತ ಮಸಾಜ್ ಪಾರ್ಲರ್ ಮತ್ತು ಸ್ಕಿಲ್ ಗೇಮ್ ಕೇಂದ್ರವೊಂದಕ್ಕೆ ದಾಳಿ ನಡೆಸಿ ಬೀಗ ಜಡಿದಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ನಗರದ ಅಂಬೇಡ್ಕರ್ ವೃತ್ತ ಬಳಿಯ ಸ್ಕಿಲ್‌ಗೇಮ್ ಕೇಂದ್ರಕ್ಕೆ ದಾಳಿ ನಡೆಸಿ ಬೀಗ ಜಡಿದಿದ್ದರು. ಇದೀಗ ಮೇಯರ್ ಕವಿತಾ ಸನಿಲ್ ಅವರು ನಗರದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಮಸಾಜ್ ಪಾರ್ಲರ್ ಹಾಗೂ ಸ್ಕಿಲ್ ಗೇಮ್ ಕೇಂದ್ರಗಳ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

ಬಿಜೈಯಲ್ಲಿ ದಾಳಿ:

ಮೊದಲಿಗೆ ಬಿಜೈನಲ್ಲಿರುವ ‘ಒಲಿವ್ ಲೀಫ್’ ಮಸಾಜ್ ಕೇಂದ್ರಕ್ಕೆ ದಾಳಿ ನಡೆಸಿದಾಗ ಅಲ್ಲಿ ಮೂವರು ಪುರುಷರು ಮತ್ತು ಇಬ್ಬರು ಯುವತಿಯರು ಇರುವುದು ಕಂಡುಬಂತು.

ಮೇಯರ್ ಮತ್ತು ಅಧಿಕಾರಿಗಳು ಕೇಂದ್ರಕ್ಕೆ ದಾಳಿ ನಡೆಸುವ ಸಂದರ್ಭದಲ್ಲಿ ಪುರುಷರು ಅರೆಬೆತ್ತಲಾಗಿದ್ದರು. ಅವರಿಗೆ ಯುವತಿಯರು ಮಸಾಜ್ ಸೇವೆ ಒದಗಿಸುತ್ತಿದ್ದರು. ಅಲ್ಲಿದ್ದವರಲ್ಲಿ ಇಬ್ಬರು ಪುರುಷರು ಓಡಿ ಹೋಗಿದ್ದರೆ, ಒಬ್ಬ ಶೌಚಾಲಯದ ಒಳಗೆ ಅಡಗಿಕೊಂಡಿದ್ದ.

ಬಲ್ಮಠ ಬಳಿ ದಾಳಿ:

ಬಲ್ಮಠದ ಲಕ್ಷ್ಮೀ ಕೃಷ್ಣ ಟವರ್‌ನಲ್ಲಿರುವ ‘ಗ್ರೀನ್ ವ್ಯಾಲಿ’ ಪಾರ್ಲರ್‌ಗೆ ದಾಳಿ ನಡೆಸಿದಾಗಲೂ ಪುರುಷರು ಅರೆಬೆತ್ತಲಾಗಿರುವುದು ಕಂಡುಬಂತು. ಈ ಸಂದರ್ಭ ಕೇಂದ್ರದ ಮಾಲಕರು ಮೇಯರ್ ಅವರೊಂದಿಗೆ ವಾಗ್ವಾದಕ್ಕಿಳಿದರು. ಯಾವುದೇ ಅನೈತಿಕ ಚಟುವಟಿಕೆ ನಡೆಸುತ್ತಿಲ್ಲ ಎಂದು ಸಬೂಬು ನೀಡಿದರು.

ಅನೈತಿಕ ಚಟುವಟಿಕೆ ಇಲ್ಲವಾದರೆ ಪುರುಷರಿಗೆ ಪುರುಷರು ಏಕೆ ಮಸಾಜ್ ಮಾಡುತ್ತಿಲ್ಲ? ಕೋಣೆಯೊಳಗೆ ಸಿಸಿ ಕ್ಯಾಮರಾ ಯಾಕೆ ಅಳವಡಿಸಿಲ್ಲ ಎಂದು ಪ್ರಶ್ನಿಸಿದರು.

ಬಾಗಿಲು ಜಡಿದು ಪರಾರಿ:

ಮೇಯರ್ ದಾಳಿಯ ವಿಷಯ ತಿಳಿದ ಕೆಲವು ಮಸಾಜ್ ಪಾರ್ಲರ್‌ಗಳ ಮಾಲಕರು ಮೇಯರ್ ಆಗಮಿಸುವಷ್ಟರಲ್ಲಿ ಬಾಗಿಲು ಮುಚ್ಚಿ ಪರಾರಿಯಾಗಿದ್ದರು.

ಬಲ್ಮಠದ ಇಂದ್ರಭವನ ಹೊಟೇಲ್ ಹತ್ತಿರದ ‘ದಿ ಪ್ಯಾರಡೈಸ್ ಯೂನಿಸೆಕ್ಸ್ ಪಾರ್ಲರ್’, ಜ್ಯೋತಿ ಸರ್ಕಲ್ ಬಳಿಯ ಸ್ಮಾರ್ಟ್ ಟವರ್‌ನಲ್ಲಿರುವ ‘ಅರೋಮ’ ಮತ್ತು ‘ರಾಯಲ್ ಸ್ಪಾ’ ಮಸಾಜ್ ಸೆಂಟರ್‌ಗಳು ಅದಾಗಲೇ ಬಾಗಿಲು ಮುಚ್ಚಿದ್ದವು. ಈ ಎಲ್ಲ ಕೇಂದ್ರಗಳಿಗೂ ಮೇಯರ್ ಬೀಗ ಜಡಿಯಲು ಆದೇಶಿಸಿದರು.

ಸ್ಕಿಲ್‌ಗೇಮ್ ಲೇಡಿ ಮ್ಯಾನೇಜರ್ ವಾಗ್ವಾದ:

ಫಳ್ನೀರ್‌ನಲ್ಲಿರುವ ಫಳ್ನೀರ್ ಟವರ್ಸ್ ಪಕ್ಕದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಬೃಹತ್ ಸ್ಕಿಲ್ ಗೇಮ್ ಕೇಂದ್ರಕ್ಕೆ ಮೇಯರ್ ದಾಳಿ ನಡೆಸಿದರು. ಈ ಸಂದರ್ಭ ಅಲ್ಲಿದ್ದ ಮಹಿಳಾ ವ್ಯವಸ್ಥಾಪಕಿ ಮೇಯರ್ ಮೇಲೆಯೇ ಹರಿಹಾಯ್ದರು. ಸ್ಕಿಲ್ ಗೇಮ್ ಕೇಂದ್ರ ನಡೆಸಲು ನಮಗೆ ಹೈಕೋರ್ಟ್ ಆದೇಶ ಇದೆ ಎಂದರು. ಹೈಕೋರ್ಟ್ ಆದೇಶ ಇದ್ದರೂ ಪಾಲಿಕೆಯಿಂದ ಟ್ರೇಡ್ ಲೈಸನ್ಸ್ ಪಡೆಯಲೇಬೇಕು ಎಂದು ಪಟ್ಟು ಹಿಡಿದರು.

ಈ ವೇಳೆ ಮೇಯರ್ ಅವರು ಕೇಂದ್ರಕ್ಕೆ ಬೀಗ ಜಡಿಯಲು ಮುಂದಾದಾಗ ವ್ಯವಸ್ಥಾಪಕರು ಬಿಡಲಿಲ್ಲ. ಈ ವೇಳೆ ಪೊಲೀಸ್ ಆಯುಕ್ತರಿಗೆ ಮೇಯರ್ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಮನವಿ ಮಾಡಿದರು.

ಡಿಸಿಪಿ ಶಾಂತರಾಜು, ಎಸಿಪಿ ಉದಯ ನಾಯ್ಕೆ, ಇನ್ಸ್‌ಪೆಕ್ಟರ್ ಬೆಳ್ಳಿಯಪ್ಪ ಮತ್ತು ಮಹಿಳಾ ಪೊಲೀಸರು ಸ್ಥಳಕ್ಕಾಗಮಿಸಿದರು. ಮ್ಯಾನೇಜರ್ ಅವರನ್ನು ಕೇಂದ್ರದಿಂದ ಹೊರಹಾಕಿ ಕೇಂದ್ರಕ್ಕೆ ಬೀಗ ಜಡಿದರು. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣಿ, ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಎಲ್ಲ ಅನಧಿಕೃತ ಕೇಂದ್ರಗಳ ವಿರುದ್ಧ ಕ್ರಮ: ಮೇಯರ್‌ ಪಾಲಿಕೆಯಿಂದ ವ್ಯಾಪಾರ ಪರವಾನಗಿ ಪಡೆಯದಿರುವುದರಿಂದ ಈ ದಾಳಿ ನಡೆಸಲಾಗಿದೆ. ಇಂತಹ ಅನಧಿಕೃತ ಕೇಂದ್ರಗಳ ವಿರುದ್ಧ ಪಾಲಿಕೆಯಿಂದ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಮೇಯರ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸ್ಕಿಲ್ ಗೇಮ್ ಮತ್ತು ಪಾರ್ಲರ್‌ಗಳು ಅನಧಿಕೃತವಾಗಿ ನಡೆಯುತ್ತಿದೆ. ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಎಲ್ಲ ಅನಧಿಕೃತ ಮಸಾಜ್ ಪಾರ್ಲರ್ ಮತ್ತು ಸ್ಕಿಲ್‌ಗೇಮ್ ಕೇಂದ್ರಗಳನ್ನು ಬಂದ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.

ಸ್ಕಿಲ್ ಗೇಮ್‌ಗಳಲ್ಲಿ ಉಳಿದ ಜೂಜಾಟಗಳನ್ನು ಆಡುತ್ತಿದ್ದಾರೆ. ಇವು ನಿಲ್ಲಬೇಕು ಎಂದರು. ಅನೇಕ ಮಸಾಜ್ ಪಾರ್ಲರ್‌ಗಳು ಆಯುರ್ವೇದಿಕ್ ಎಂದು ಪರವಾನಗಿ ಪಡೆದು ಅನೈತಿಕ ಚಟುವಟಿಕೆ ನಡೆಸುತ್ತಿವೆ. ಇಂಥ ಪಾರ್ಲರ್ ಒಳಗೆ ಸಿಸಿ ಕ್ಯಾಮರಾ ಅಳವಡಿಸಬೇಕು. ಪುರುಷರಿಗೆ ಪುರುಷರೇ ಮಸಾಜ್ ಮಾಡಬೇಕು ಎಂದು ಕವಿತಾ ಸನಿಲ್ ಹೇಳಿದರು.

ಪೊಲೀಸರಿಗೆ 2.50 ಲಕ್ಷ ರೂ. ಹಫ್ತಾ ಆರೋಪ: ಫಳ್ನೀರ್ ರಸ್ತೆಯ ಸ್ಕಿಲ್ ಗೇಮ್ ಸೆಂಟರ್ ಮೇಲೆ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ ಮೇಯರ್, ನಗರದ ಸ್ಕಿಲ್‌ಗೇಮ್ ಸೆಂಟರ್‌ವೊಂದರ ಮಾಲಕರು ತಿಂಗಳಿಗೆ 2.50 ಲಕ್ಷ ರೂ.ಗಳನ್ನು ಪೊಲೀಸರಿಗೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ ಎಂದರು. ಇದಕ್ಕೆ ಡಿಸಿಪಿ ಶಾಂತರಾಜು ಅದು ಕೇವಲ ಆರೋಪ ಮಾತ್ರ. ಅಂತಹ ವ್ಯವಸ್ಥೆ ಇಲ್ಲ ಎಂದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X