ಬಂಟ್ವಾಳ ಉಪ ವಿಭಾಗಕ್ಕೆ ನೂತನ ಎಎಸ್ಪಿ ನೇಮಕ

ಬಂಟ್ವಾಳ, ಜು.11: ಬಂಟ್ವಾಳ ಉಪ ವಿಭಾಗದ ನೂತನ ಎಎಸ್ಪಿ ಆಗಿ ಐಪಿಎಸ್ ಅಧಿಕಾರಿ ಡಾ.ಅರುಣ್ ಕೆ. ಯವರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಅರುಣ್ ಕುಮಾರ್ ಅವರು ಹಾಸನ ಜಿಲ್ಲೆಯ ಹೊಳೆನರಸೀಪುರ ಉಪವಿಭಾಗದಲ್ಲಿ ಎಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಬಂಟ್ವಾಳ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
Next Story





