ಸರಕಾರಿ ಅಧಿಕಾರಿ ಮೇಲೆ ಮೀನು ಎಸೆದ ಶಾಸಕನ ಬಂಧನ

ಮುಂಬೈ, ಜು. 11: ಕಳೆದ ವಾರ ಸರಕಾರದ ಹಿರಿಯ ಅಧಿಕಾರಿ ಮೇಲೆ ಮೀನು ಎಸೆದ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕ ನಿತೇಶ್ ರಾಣೆಯನ್ನು ಸಿಂಧುದುರ್ಗ ಜಿಲ್ಲೆಯಲ್ಲಿ ಇಂದು ಪೊಲೀಸರು ಬಂಧಿಸಿದ್ದಾರೆ.
ಕೊಂಕಣ ಕರಾವಳಿಯ ಮಲ್ವನ್‌ನಲ್ಲಿ ಇತರ 23 ಮಂದಿಯೊಂದಿಗೆ ರಾಣೆಯನ್ನು ಬಂದಿಸಲಾಗಿದ್ದು, ಇಲ್ಲಿನ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರಪಡಿಸಲಾಯಿತು ಎಂದು ಸಿಂಧುದುರ್ಗಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಕಾಶ್ ಗಾಯಕ್ವಾಡ್ ಹೇಳಿದ್ದಾರೆ.
ಸಿಂಧುದುರ್ಗದ ಮೀನುಗಾರಿಕೆ ಆಯುಕ್ತರ ಕಚೇರಿಯಲ್ಲಿ ಜುಲೈ 6ರಂದು ರಾಣೆ ಸಭೆ ನಡೆಸಿರುವುದು ಸ್ಥಳೀಯ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿದ ದೃಶ್ಯಾವಳಿಯಲ್ಲಿ ಕಂಡು ಬಂದಿದೆ. ಮೀನುಗಾರರ ಸಮಸ್ಯೆ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿತ್ತು. ಶಾಸಕರು ತಾಳ್ಮೆ ಕಳೆದುಕೊಂಡು ಅಲ್ಲಿದ್ದ ಮೀನನ್ನು ಆಯುಕ್ತರ ಮೇಲೆ ಎಸೆದಿದ್ದರು.
ಅಧಿಕಾರಿ ಅಪ್ರಬುದ್ಧ ನಡೆವಳಿಕೆ ವಿರೋಧಿಸಿ ನಾನು ಮೀನು ಎಸೆದಿರುವುದಾಗಿ ಕರಾವಳಿ ಸಿಂಧುದುರ್ಗಾ ಜಿಲ್ಲೆಯ ಕಂಕಾವ್ಳಿಯ ಶಾಸಕ ರಾಣೆ ಸಮರ್ಥನೆ ನೀಡಿದ್ದರು.
Next Story





