ತಂಗಿ ವಿವಾಹಕ್ಕಾಗಿ ಚಿನ್ನದಂಗಡಿಗೆ ಕನ್ನ
ಬೆಂಗಳೂರು, ಜು.11: ಲಾಡ್ಜ್‌ವೊಂದರಲ್ಲಿದ್ದುಕೊಂಡು ಚಿನ್ನಾಭರಣ ಅಂಗಡಿಗೆ ಕನ್ನ ಹಾಕಿದ ಪ್ರಕರಣ ಸಂಬಂಧ ಆರೋಪಿಯ ವಿಚಾರಣೆ ತೀವ್ರಗೊಳಿಸಲಾಗಿದ್ದು, ತಂಗಿ ವಿವಾಹಕ್ಕಾಗಿ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಬಂಧಿತ ಆರೋಪಿ ಗುಜರಾತ್ ಮೂಲದ ಹುಸೇನ್, ತನ್ನ ತಂಗಿಯ ವಿವಾಹವನ್ನು ಅಹಮದಾಬಾದ್‌ನಲ್ಲಿ ಅದ್ದೂರಿಯಾಗಿ ಮಾಡಬೇಕು ಎಂಬ ಉದ್ದೇಶಕ್ಕಾಗಿ ಜೂ.1ರಂದು ಬೆಂಗಳೂರಿಗೆ ಆಗಮಿಸಿ, ತಾನು ಕಳವು ಮಾಡಿದ್ದ ಕಾಟನ್‌ಪೇಟೆ ಲಾಡ್ಜ್‌ವೊಂದರ ಕೆಳ ಭಾಗದಲ್ಲಿದ್ದ ಚಿನ್ನದ ಅಂಗಡಿ ಬಗ್ಗೆ ಮಾಹಿತಿ ಪಡೆದಿದ್ದಾನೆ ಎನ್ನಲಾಗಿದೆ.
Next Story





