ಚೀನಾ ಪತ್ರಿಕೆಯಿಂದ ಜಿಎಸ್‌ಟಿಗೆ ಶ್ಲಾಘನೆ

ಬೀಜಿಂಗ್, ಜು. 11: ಭಾರತದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದ ಚೀನಾದ ಸರಕಾರಿ ಒಡೆತನದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಮಂಗಳವಾರ, ಭಾರತದ ನೂತನ ತೆರಿಗೆ ವ್ಯವಸ್ಥೆಯನ್ನು ಶ್ಲಾಘಿಸಿದೆ.
ನೂತನ ತೆರಿಗೆ ವ್ಯವಸ್ಥೆ ಜಿಎಸ್‌ಟಿಯಿಂದಾಗಿ ಅಂತಾರಾಷ್ಟ್ರೀಯ ಹೂಡಿಕೆಗೆ ಭಾರತ ಹೆಚ್ಚು ಆಕರ್ಷಕವಾಗಿದೆ ಎಂದು ಅದು ಹೇಳಿದೆ.
‘‘ನೂತನ ತೆರಿಗೆ ವ್ಯವಸ್ಥೆಯು ‘ಮೇಕ್ ಇನ್ ಇಂಡಿಯ’ ಕಾರ್ಯಕ್ರಮಕ್ಕೆ ಪೂರಕವಾಗಿರುತ್ತದೆ ಹಾಗೂ ಇದು ಭಾರತದ ಉತ್ಪಾದನಾ ಸ್ಪರ್ಧಾತ್ಮಕತೆಯನ್ನು ಸುಧಾರಿಸುತ್ತದೆ’’ ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ.
Next Story





