ಅಕ್ರಮ ಮದ್ಯ ಸಾಗಾಟ: ರಿಕ್ಷಾ ಸಹಿತ ಮೂವರ ವಶ
ಪುತ್ತೂರು, ಜು.11: ಅಟೋ ರಿಕ್ಷಾದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಮಂಗಳವಾರ ಪತ್ತೆ ಹಚ್ಚಿದ ಪುತ್ತೂರು ನಗರ ಪೊಲೀಸರು ಅಟೋರಿಕ್ಷಾ ಸಹಿತ ಸುಮಾರು 51 ಸಾವಿರ ಮೊತ್ತದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಬೆಳಿಯೂರು ಗ್ರಾಮದ ಕಳೆಂಜ ನಿವಾಸಿ ಬೊಗಟ ಎಂಬವರ ಪುತ್ರ ರಿಕ್ಷಾ ಚಾಲಕ ಶೇಖರ(26) ಮತ್ತು ಬೆಳಿಯೂರು ಗ್ರಾಮದ ಬೊಳೆಂಟು ನಿವಾಸಿ ಅಣ್ಣಿಗೌಡ ಎಂಬವರ ಪುತ್ರ ಚಂದ್ರಶೇಖರ(24) ಬಂಧಿತ ಆರೋಪಿಗಳು.
ಅವರು ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾದಮ ಕೆಮ್ಮಾಯಿ ಎಂಬಲ್ಲಿ ರಿಕ್ಷಾದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂದ್ದು, ಈ ಮದ್ಯವನ್ನು ಪೆರ್ನೆಗೆ ಸಾಗಿಸುತ್ತಿದ್ದರು ಎನ್ನಲಾಗಿದೆ. ರಿಕ್ಷಾದಲ್ಲಿ 90ಎಂಲ್‌ನ 180 ಸೀಸೆ ಮತ್ತು 180 ಎಂಎಲ್‌ನ 80 ಸೀಸೆ ಸೇರಿದಂತೆ ಒಟ್ಟು 30 ಲೀಟರ್ ಮದ್ಯ ವಶಕ್ಕೆ ಪಡೆದುಕೊಂಡಿದ್ಧಾರೆ. ಈ ಮದ್ಯದ ಮೌಲ್ಯ ರೂ. 11 ಸಾವಿರ ಎಂದು ಅಂದಾಜಿಸಲಾಗಿದೆ. ಹೆದ್ದಾರಿಯಲ್ಲಿ ಮದ್ಯಮಾರಾಟ ನಿಷೇಧವಾಗಿರುವ ಹಿನ್ನಲೆಯಲ್ಲಿ ಆರೋಪಿಗಳು ಅಕ್ರಮವಾಗಿ ಮಾರಾಟ ಮಾಡಲು ಈ ಮದ್ಯವನ್ನು ಸಾಗಾಟ ನಡೆಸುತ್ತಿದ್ದರು ಎನ್ನಲಾಗಿದೆ.





