ಉತ್ತಮ ಸಮನ್ವಯಕ್ಕಾಗಿ ತಿಂಗಳಿಗೊಮ್ಮೆ ಸಭೆ ಸೇರಲು 18 ಪ್ರತಿಪಕ್ಷಗಳ ನಿರ್ಧಾರ

ಹೊಸದಿಲ್ಲಿ,ಜು.11: ವಿವಿಧ ನಿರ್ಣಾಯಕ ವಿಷಯಗಳನ್ನು ಚರ್ಚಿಸಲು ಮತ್ತು ಸರಕಾರವನ್ನು ಒಗ್ಗಟ್ಟಿನಿಂದ ಎದುರಿಸಲು ತಮ್ಮೊಳಗೆ ಉತ್ತಮ ಸಮನ್ವಯವನ್ನು ಕಾಯ್ದುಕೊಳ್ಳಲು ತಿಂಗಳಿಗೊಮ್ಮೆ ಸಭೆ ಸೇರಲು ಕಾಂಗ್ರೆಸ್ ಸೇರಿದಂತೆ 18 ಪ್ರತಿಪಕ್ಷಗಳು ನಿರ್ಧರಿಸಿವೆ.
ಉಪ ರಾಷ್ಟ್ರಪತಿ ಹುದ್ದೆಗೆ ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪ್ರತಿಪಕ್ಷಗಳು ಮಂಗಳವಾರ ಇಲ್ಲಿ ನಡೆಸಿದ ಸಭೆಯ ಬಳಿಕ ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ’ಬ್ರಿಯೆನ್ ಅವರು ಈ ವಿಷಯವನ್ನು ತಿಳಿಸಿದರು.
ರೈತರ ಆತ್ಮಹತ್ಯೆಗಳು, ಜಿಎಸ್‌ಟಿ ಮತ್ತು ನೋಟು ರದ್ದತಿ ಪರಿಣಾಮ, ಕೆಲವು ರಾಜ್ಯಪಾಲರ ಪಾತ್ರ ಸೇರಿದಂತೆ ವಿವಿಧ ಪ್ರಮಖ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದ್ದು, ಮುಂಬರುವ ಸಂಸತ್ ಅಧಿವೇಶನದಲ್ಲಿ ಇವುಗಳನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.
Next Story





