ಯುವ ಮೊರ್ಚಾದ ಮುಖಂಡರ ಮೇಲೆ ಪ್ರಕರಣ ದಾಖಲಿಸಲು ಯತ್ನ: ಖಂಡನೆ
ಮಂಗಳೂರು, ಜು.11: ಬಿ.ಸಿ ರೋಡ್ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಿಜೆಪಿಯ ಯುವ ಮೊರ್ಚಾದ ವಿರುದ್ಧ ಸುಳ್ಳು ಕೇಸು ಹಾಕಿ ಬಂಧಿಸುವ ಯತ್ನ ನಡೆಸುತ್ತಿರುವುದಕ್ಕೆ ದ.ಕ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸಂದೇಶ್ ಶೆಟ್ಟಿ ಖಂಡನೆ ವ್ಯಕ್ತಪಡಿಸಿದರು. ಕರಾವಳಿಯ ಕೋಮು ಗಲಭೆ ನಿಯಂತ್ರಣ ಅಧಿಕಾರಿಯಾಗಿ ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರನ್ನು ನೇಮಿಸಿರುವುದು ಸರಿಯಾದ ಕ್ರಮವಲ್ಲ ಎಂದೂ ಸುದ್ದಿಗೊಷ್ಠಿಯಲ್ಲಿಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಇದಕ್ಕೆ ಕಾರಣರಾದ ಉಸ್ತುವಾರಿ ಸಚಿವರು ರಾಜಿನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ರಕ್ಷಿತ್ ಕೊಟ್ಟಾರಿ, ಸಂದೀಪ್ ಶೆಟ್ಟಿ, ನಂದನ್ ಮಲ್ಯ, ವರುಣ್ ಚೌಟ, ಸುದರ್ಶನ, ಈಶ್ವರ ಬಾಬು ಮೊದಲಾದವರು ಉಪಸ್ಥಿತರಿದ್ದರು.
Next Story





