ಕಿನ್ನಿಗೋಳಿ ಬಳಿ ಗಾಂಜಾ ಸಾಗಾಟ: ಓರ್ವನ ಬಂಧನ

ಮೂಲ್ಕಿ,ಜು.11: ಕಿನ್ನಿಗೋಳಿ ಸಮೀಪದ ಭಟ್ಟಕೋಡಿ ಬಳಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮೂಲ್ಕಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಮೂಲ್ಕಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಉಪ ನಿರೀಕ್ಷಕ ಚಂದ್ರಶೇಖರ್ ರವರು ಸಿಬಂದಿಯೊಂದಿಗೆ ಮೂಲ್ಕಿ-ಮೂಡಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಕಿನ್ನಿಗೋಳಿ ಸಮೀಪದ ಭಟ್ಟಕೋಡಿ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಸೂರಿಂಜೆ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿ ಅದರ ಸವಾರ ಸುರತ್ಕಲ್ ಕಾಟಿಪಳ್ಳ ನಾಲ್ಕನೇ ಬ್ಲಾಕಿನ ನಿವಾಸಿ ಮುಹಮ್ಮದ್ ರಿಜ್ವಾನ್ ನನ್ನು ತಪಾಸಣೆ ನಡೆಸಿದಾಗ ರಿಜ್ವಾನ್ ಬಳಿ ಯಾವುದೇ ದಾಖಲೆ ಪತ್ರಗಳಿಲ್ಲದೆ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.
ಕೂಡಲೇ ಆರೋಪಿಯನ್ನು ಪೊಲೀಸರು ಬಂಧಿಸಿ ಆತನಿಂದ 377 ಗ್ರಾಂ ತೂಕದ ವಿವಿಧ ಸಣ್ಣ ಸಣ್ಣ ಕವರ್ ಗಳಲ್ಲಿ ತುಂಬಿಸಿದ್ದ ಗಾಂಜಾ ಹಾಗೂ ಗಾಂಜಾ ಮಾರಾಟದ ಬಾಬ್ತು ರೂ. 300 ನಗದು, ಗಾಂಜಾವನ್ನು ತುಂಬಿಸಲ ಇಟ್ಟಿದ್ದ 12 ಸಣ್ಣ ಸಣ್ಣ ಪ್ಲಾಸ್ತಿಕ್ ಕವರ್ ಮತ್ತು ದ್ವಿಚಕ್ರ ವಾಹನವನ್ನು ವಶ ಪಡಿಸಿಕೊಳ್ಳಲಾಗಿದೆ. ಆಪಾದಿತನ ವಿರುದ್ದ ಎನ್ ಟಿ ಪಿ ಎಸ್ ಕಾಯ್ದೆಯಡಿ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





