ಆಯುರ್ವೇದ, ಫಾರ್ಮಸಿ, ವೃತ್ತಿಪರ ಕೋರ್ಸುಗಳಿಗೆ 2ನೆ ಸುತ್ತಿನ ಸಿಇಟಿ ಆಯ್ಕೆ ಪ್ರಕ್ರಿಯೆ ಆರಂಭ
ಮಂಗಳೂರು, ಜು. 11: 2017-18ನೆ ಸಾಲಿನ ವಿವಿಧ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಬಯಸಿ ಸಿಇಟಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಮೊದಲ ಸುತ್ತಿನ ಆಯ್ಕೆ ಪ್ರಕ್ರಿಯೆ ಕೊನೆಗೊಂಡಿದ್ದು, ಆನ್ ಲೈನ್ ಕೌನ್ಸಿಲಿಂಗ್ ಮೂಲಕ ಸೀಟುಗಳನ್ನು ಆಯ್ಕೆ ಮಾಡುವ 2ನೆ ಸುತ್ತಿನ ಆಯ್ಕೆ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜು.11 ರಂದು ಆರಂಭಿಸಿದೆ.
ಈ ಸುತ್ತಿನಲ್ಲಿ ಫಾರ್ಮಸಿ, ಆಯುರ್ವೇದ, ಯುನಾನಿ, ಹೋಮಿಯೋಪತಿ, ನ್ಯಾಚ್ಯುರೋಪತಿ ಮತ್ತು ಯೋಗ ಒಳಗೊಂಡಂತೆ ಇಂಜಿನಿಯರಿಂಗ್ ಹಾಗೂ ಮತ್ತಿತರ ಕೋರ್ಸುಗಳ ಪ್ರವೇಶಕ್ಕೆ ಆಯ್ಕೆ ನೀಡಬಹುದಾಗಿದೆ.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ 'ನೀಟ್' ಪರೀಕ್ಷೆ ಬರೆದಿರುವ ಮತ್ತು ಸಿಇಟಿ ಪರೀಕ್ಷೆ ಬರೆದು ದಾಖಲಾತಿ ಪರಿಶೀಲನೆ ಮಾಡದಿರುವ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆಯೂ ಸಿಇಟಿ ಸಹಾಯ ಕೇಂದ್ರಗಳಲ್ಲಿ ಇಂದಿನಿಂದ ಆರಂಭಗೊಂಡಿದೆ.
ಹೆಚ್ಚಿನ ಮಾಹಿತಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ kea.kar.nic.in ನಲ್ಲಿ ಪಡೆಯಬಹುದು ಎಂದು ಕೆರಿಯರ್ ಗೈಡೆನ್ಸ್ ಆಂಡ್ ಇನ್ಫಾರ್ಮೇಶನ್ ಸೆಂಟರ್ ನ ಅಧ್ಯಕ್ಷ ಉಮರ್ ಯು.ಎಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







