ರವಿಶಾಸ್ತ್ರಿ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್
ದ್ರಾವಿಡ್ ಬ್ಯಾಟಿಂಗ್, ಝಹೀರ್ ಖಾನ್ ಬೌಲಿಂಗ್ ಕೋಚ್ ಆಗಿ ಆಯ್ಕೆ

ಮುಂಬೈ, ಜು.11: ಭಾರತದ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕೊನೆಗೂ ಆಲ್‌ರೌಂಡರ್ , ಮಾಜಿ ನಿರ್ದೇಶಕ ರವಿಶಾಸ್ತ್ರಿ ನೇಮಕಗೊಂಡಿದ್ದಾರೆ.
ಬಿಸಿಸಿಐ ಕೊನೆಗೂ ಕೋಚ್ ಹುದ್ದೆಗೆ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಿದ್ದು, ರವಿಶಾಸ್ತ್ರಿ ಕೊನೆಗೂ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
ಮಹಾನ್ ಗೋಡೆ ಖ್ಯಾತಿಯ ಕಲಾತ್ಮಕ ಬ್ಯಾಟ್ಸ್ ಮನ್ ಕನ್ನಡಿಗ ರಾಹುಲ್ ದ್ರಾವಿಡ್ ಬ್ಯಾಟಿಂಗ್ ಕೋಚ್ ಆಗಿ ಮತ್ತು ಭಾರತದ ಮಾಜಿ ವೇಗಿ ಝಹೀರ್ ಖಾನ್ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿರುವುದನ್ನು ಬಿಸಿಸಿಐ ಮಂಗಳವಾರ ರಾತ್ರಿ ಅಧಿಕೃತವಾಗಿ ಪ್ರಕಟಿಸಿದೆ. ಭಾರತ ವಿದೇಶ ಪ್ರವಾಸ ಕೈಗೊಂಡ ವೇಳೆ ದ್ರಾವಿಡ್ ಬ್ಯಾಟಿಂಗ್ ಕೋಚ್ ಆಗಿ ತಂಡದೊಂದಿಗಿರುತ್ತಾರೆ ಎಂದು ಬಿಸಿಸಿಐ ತಿಳಿಸಿದೆ.
Next Story





