ಭೂಕುಸಿತ: 14 ಸಾವು

ಇಟಾನಗರ್, ಜು. 11: ಅರುಣಾಚಲ ಪ್ರದೇಶದ ಪಾಪುಂಪರೇ ಜಿಲ್ಲೆಯಲ್ಲಿ ಮಂಗಳವಾರ ಸುರಿದ ಭಾರೀ ಮಳೆಗೆ ಭೂಕುಸಿತ ಉಂಟಾಗಿದ್ದು, 14 ಮಂದಿ ಮೃತಪಟ್ಟಿರುವ ಸಾಧ್ಯತೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಭೂಕುಸಿತಕ್ಕೆ ಸಿಲುಕಿದ ಯಾರೊಬ್ಬರೂ ಜೀವಂತವಾಗಿರುವ ಸಾಧ್ಯತೆ ಇಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಹೆಚ್ಚುವರಿ ಉಪ ಜಿಲ್ಲಾಧಿಕಾರಿ ಜಲಾಶ್ ಪರ್ಟಿನ್ ತಿಳಿಸಿದ್ದಾರೆ.
ಲಾಪ್‌ಟಾಪ್ ಗ್ರಾಮದಲ್ಲಿ ಮಂಗಳವಾರ 3.30ರ ಹೊತ್ತಿಗೆ ಭೂಕುಸಿತ ಉಂಟಾಯಿತು. ಪಾಪುಂಪಾರಾದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
Next Story





