ಝಾಕಿರ್ ನಾಯ್ಕ್ ಆಪ್ತ ಅಮೀರ್ ಗಝ್ದರ್ ಗೆ ಜಾಮೀನು

ಹೊಸದಿಲ್ಲಿ, ಜು.12: ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ಅವರ ನಿಕಟವರ್ತಿ ಅಮೀರ್ ಗಝ್ದರ್ ಅವರಿಗೆ ವಿಶೇಷ ಪಿಎಂಎಲ್ ಎ ನ್ಯಾಯಾಲಯ ಜಾಮೀನು ನೀಡಿದೆ.
ಝಾಕಿರ್ ನಾಯ್ಕ್ ವಿರುದ್ಧ ದಾಖಲಾಗಿದ್ದ ಹಣ ಚಲುವೆ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಂಧಿಸಲಾಗಿತ್ತು. ನಗದು ವ್ಯವಹಾರದಲ್ಲಿ ಅಮೀರ್ ಗಝ್ದರ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಜಾರಿ ನಿರ್ದೇಶನಾಲಯ ಆರೋಪಿಸಿತ್ತು.
ನಿರ್ದೇಶನಾಲಯವು ಹಣ ಚಲುವೆ ನಡೆದಿದೆ ಎನ್ನುವುದನ್ನು ನಿರೂಪಿಸಲು ಯಾವುದೇ ಸಾಕ್ಷಿಯನ್ನು ನೀಡಿಲ್ಲ ಎಂದು ಗಝ್ದರ್ ಆರೋಪಿಸಿದ್ದಾರೆ.
Next Story





