Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. 2ನೆ ಮಹಾಯುದ್ದ ಕಾಲದ ‘ಟೈಪ್‌ರೈಟರ್’...

2ನೆ ಮಹಾಯುದ್ದ ಕಾಲದ ‘ಟೈಪ್‌ರೈಟರ್’ 33.23 ಲಕ್ಷ ರೂ.ಗೆ ಹರಾಜು

ವಾರ್ತಾಭಾರತಿವಾರ್ತಾಭಾರತಿ12 July 2017 7:16 PM IST
share
2ನೆ ಮಹಾಯುದ್ದ ಕಾಲದ ‘ಟೈಪ್‌ರೈಟರ್’ 33.23 ಲಕ್ಷ ರೂ.ಗೆ ಹರಾಜು

ಬುಖಾರೆಸ್ಟ್ (ರೊಮೇನಿಯ), ಜು. 12: ರೊಮೇನಿಯದಲ್ಲಿ ಹಳೆಯ ಟೈಪ್‌ರೈಟರೊಂದು 45,000 ಯುರೋ (33.23 ಲಕ್ಷ ರೂಪಾಯಿ) ಬೆಲೆಗೆ ಮಾರಾಟವಾಗಿದೆ.

ಖರೀದಿದಾರನು ಈ ಟೈಪ್‌ರೈಟರನ್ನು ಬುಖಾರೆಸ್ಟ್‌ನ ಗುಜರಿ ಮಾರುಕಟ್ಟೆಯಿಂದ 100 ಯುರೋ (7385 ರೂಪಾಯಿ) ಕೊಟ್ಟು ಖರೀದಿಸಿದ್ದರು. ಬಳಿಕ ಅದನ್ನು ಬುಖಾರೆಸ್ಟ್‌ನ ಹರಾಜು ಮಳಿಗೆ ‘ಆರ್ಟ್‌ಮಾರ್ಕ್’ನಲ್ಲಿ ಹರಾಜಿಗಿಟ್ಟರು. ಹರಾಜಿನ ಆರಂಭಿಕ ಬೆಲೆ 9,000 ಯುರೋ (6.65 ಲಕ್ಷ ರೂಪಾಯಿ) ಆಗಿತ್ತು.

ಮಂಗಳವಾರ, ‘ಆರ್ಟ್‌ಮಾರ್ಕ್’ ಈ ಟೈಪ್‌ರೈಟರನ್ನು 45,000 ಯುರೋ ಬಿಡ್ ಸಲ್ಲಿಸಿದ ವ್ಯಕ್ತಿಗೆ ಮಾರಾಟ ಮಾಡಿತು.

ಹಾಗಾದರೆ, ಈ ಟೈಪ್‌ರೈಟರ್‌ನಲ್ಲಿ ಅಂಥಾದ್ದೇನಿದೆಯಪ್ಪಾ?

ವಾಸ್ತವವಾಗಿ, ಅದು ಜರ್ಮನಿಯ ‘ವೆಹ್ರಮಾಕ್ಟ್ ಎನಿಗ್ಮ’ ಯಂತ್ರವಾಗಿತ್ತು. ಅದನ್ನು ಎರಡನೆ ಮಹಾಯುದ್ಧ ಕಾಲದಲ್ಲಿ ಸಾಮಾನ್ಯ ಭಾಷೆಯನ್ನು ಸಾಂಕೇತಿಕ ಭಾಷೆಗೆ ಹಾಗೂ ಸಾಂಕೇತಿಕ ಭಾಷೆಯನ್ನು ಸಾಮಾನ್ಯ ಭಾಷೆಗೆ ತರ್ಜುಮೆ ಮಾಡಲು ಬಳಸಲಾಗಿತ್ತು.

‘‘ಗುಜರಿ ಮಾರುಕಟ್ಟೆಯಿಂದ ಇದನ್ನು ಖರೀದಿಸಿದವರು ಸಾಂಕೇತಿಕ ಭಾಷೆಯ ಪ್ರೊಫೆಸರ್. ತಾನು ಏನನ್ನು ಖರೀದಿಸುತ್ತಿದ್ದೇನೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು’’ ಎಂದು ‘ಆರ್ಟ್‌ಮಾರ್ಕ್’ನ ಸರಕು ನಿರ್ವಾಹಕ ಕ್ರಿಸ್ಟಿಯಾನ್ ಗವ್ರಿಲ ‘ರಾಯ್ಟರ್ಸ್’ಗೆ ಹೇಳಿದರು.

ರೊಮೇನಿಯ 1944ರವರೆಗೆ ನಾಝಿ ಜರ್ಮನಿಯ ಮಿತ್ರ ದೇಶವಾಗಿತ್ತು. ಆ ವರ್ಷ ಅದು ಜರ್ಮನಿಯನ್ನು ತೊರೆದು ಅಮೆರಿಕ ನೇತೃತ್ವದ ಮಿತ್ರಪಡೆಗಳ ಸಾಲಿಗೆ ಸೇರಿತು.

ಎನಿಗ್ಮ ಯಂತ್ರವನ್ನೂ ಸೋಲಿಸಿದ್ದ ಬ್ರಿಟಿಶ್ ಗಣಿತಜ್ಞ!

ನಾಝಿ ಸೇನೆಯ ವಿವಿಧ ಶಾಖೆಗಳು ಕಳುಹಿಸುವ ಸಂಕೇತ ಭಾಷೆಯ ಸಂದೇಶಗಳನ್ನು ಬಿಡಿಸಲು ಹಾಗೂ ಸಾಂಕೇತಿಕ ಭಾಷೆಗೆ ಪರಿವರ್ತಿಸಲು ಎನಿಗ್ಮ ಯಂತ್ರವನ್ನು ಬಳಸಲಾಗುತ್ತಿತ್ತು.

ಆದರೆ, ಬ್ರಿಟನ್‌ನ ಯುದ್ಧ ಕಾಲದ ಸಂಕೇತಾಕ್ಷರಗಳನ್ನು ಬಿಡಿಸುವ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಬ್ರಿಟಿಶ್ ಗಣಿತಜ್ಞ ಅಲನ್ ಟ್ಯೂರಿಂಗ್ ಮತ್ತು ಅವರ ತಂಡ ಈ ಸಂಕೇತಗಳನ್ನು ಬಿಡಿಸುವಲ್ಲಿ ಯಶಸ್ವಿಯಾಗಿತ್ತು.

ಒಂದು ಅಂದಾಜಿನ ಪ್ರಕಾರ, ಅವರ ಕೆಲಸವು ಎರಡನೆ ಮಹಾಯುದ್ಧವನ್ನು ಎರಡು ವರ್ಷಗಳಷ್ಟು ಕಡಿಮೆ ಮಾಡಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X